ಪುತ್ತೂರು,ಜು 11 (DaijiworldNews/HR): ಕಡಬ ತಾಲೂಕಿನ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ಮಂಜೇಶ್ವರ -ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ನಿರ್ಮಿಸಲಾದ ಬೈತಡ್ಕ ಮಸೀದಿಯ ಬಳಿಯಿರುವ ಕಿರುಸೇತುವೆಯಿಂದ ಕಾರೊಂದು ಕೆಳಗೆ ಬಿದ್ದು ಯುವಕರಿಬ್ಬರು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಬೆಳ್ಳಗ್ಗಿನಿಂದ ಸಂಜೆಯವರೆಗೂ ಹುಡುಕಾಡಿದರೂ ಪ್ರಯಾಣಿಕರ ಪತ್ತೆಯಾಗದಿದ್ದು, ಇಂದು ಮತ್ತೆ ಕಾರ್ಚರಣೆ ನಡೆಸಿದರೂ ಯುವಕರು ಪತ್ತೆಯಾಗಿಲ್ಲ.
ಭಾನುವಾರ ಬೆಳ್ಳಗ್ಗಿನಿಂದ ಎನ್ಡಿಆರ್ಎಫ್ ತಂಡ ಹುಡುಕಾಟ ನಡೆಸಿದ್ದು, ಬಳಿಕ ಕತ್ತಲಾದ ಹಿನ್ನಲೆ ನೀರಿನ ರಭಸ ಕೂಡ ಹೆಚ್ಚಾಗಿದ್ದರಿಂದ ತಾತ್ಕಲಿಕವಾಗಿ ಕಾರ್ಯಚರಣೆಯನ್ನು ಸ್ಥಗಿತಗೊಳಿಸಿ, ಇಂದು ಬೆಳ್ಳಗ್ಗೆ ಮತ್ತೆ ಕಾರ್ಯಚರಣೆ ಆರಂಭಿಸಿರುವ ತಂಡ ಯುವಕರ ಪತ್ತೆಗಾಗಿ ಸಂಜೆಯವರೆಗೂ ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನಲೆಯಲ್ಲಿ ಕಾರ್ಯಚರಣೆ ಸ್ಥಗಿತಗೊಂಡಿದೆ.
ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ-ಸಾಂತ್ಯಡ್ಕ ನಿವಾಸಿ ಚೋಮ ನಾಯ್ಕ ಅವರ ಪುತ್ರ ಧನುಷ್ (25) ಹಾಗೂ ವಿಟ್ಲ ಕನ್ಯಾನ ನಿವಾಸಿ ಧನುಷ್ (21) ಅವರು ಪ್ರಯಾಣಿಸುತ್ತಿದ್ದ ಕಾರು ಬಿದ್ದು 48 ಗಂಟೆ ಕಳೆದರೂ ಯುವಕರ ಸುಳಿಲು ಸಿಗದ ಹಿನ್ನಲೆಯಲ್ಲಿ ಎಲ್ಲರಲ್ಲಿಯೂ ಆತಂಕ ಮತ್ತು ಗೊಂದಲ ಉಂಟಾಗಿದೆ.