ಪುತ್ತೂರು, ಜು 11 (DaijiworldNews/HR): ಜನರೇಟರ್ ಬ್ಯಾಟರಿ ಕಳವು ಮಾಡಿರುವ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಪುತ್ತೂರು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
2022ರ ಜೂನ್ 14ರಂದು ಪುತ್ತೂರಿನ ದರ್ಬೆಯ ಹಿತ ಆಸ್ಪತ್ರೆ ಮತ್ತು ಜುಲೈ 8ರಂದು ಪುತ್ತೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿಯ ಸಾಯಿ ಲಾಡ್ಜ್ನಲ್ಲಿ ಜನರೇಟರ್ ಬ್ಯಾಟರಿ ಕಳ್ಳತನವಾಗಿರುವ ದೂರುಗಳು ಪುತ್ತೂರು ನಗರ ಠಾಣೆಯಲ್ಲಿ ದಾಖಲಾಗಿತ್ತು.
ಪುತ್ತೂರು ಠಾಣೆಯ ಪಿಎಸ್ಐ ನೇತೃತ್ವದ ತಂಡ ಕೇರಳದ ಕೊಲ್ಲಂ ನಿವಾಸಿ ಇಟ್ಟಿ ಪಣಿಕ್ಕರ್ ಎಂಬಾತನನ್ನು ಬಂಧಿಸಿ, ಕದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪುತ್ತೂರು ಪೊಲೀಸ್ ಉಪಾಧೀಕ್ಷಕರವರ ನಿರ್ದೆಶನದಂತೆ ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕರವರು ಸುನೀಲ್ ಕುಮಾರ್ ಮಾರ್ಗದರ್ಶನದಲ್ಲಿ ಪಿ.ಎಸ್.ಐ.ರಾಜೇಶ್ ಕೆ.ವಿ.ನೇತ್ರತ್ವದಲ್ಲಿ ಸಿಬ್ಬಂದಿಗಳಾದ ಹೆಚ್.ಸಿ. ಸ್ಕರಿಯಾ.ಜಗದೀಶ್.ಸುಬ್ರಮಣ್ಯ. ಪಿ.ಸಿ. ಕಿರಣಕುಮಾರ್ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದಾರೆ.