ಬೆಳ್ತಂಗಡಿ, ಜ 21(SM): ಕೋಟ್ಯಂತರ ಜನರ ಆರಾಧ್ಯದೇವರಾಗಿದ್ದು ನಡೆದಾಡುವ ದೇವರೆಂದೇ ಗುರುತಿಸಿ, ತ್ರಿವಿಧ ದಾಸೋಹಿಗಳಾಗಿ ಶಿವಸಾಯುಜ್ಯವನ್ನು ಹೊಂದಿದ ಸಿದ್ಧಗಂಗಾ ಮಠದ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳ ದಿವ್ಯಾತ್ಮಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಿದ್ದಾರೆ.
ಸ್ವಾತಂತ್ರ ಪೂರ್ವ ಹಾಗೂ ಅನಂತರದ ದಿನಗಳಲ್ಲಿ ಶ್ರೀ ಸಾಮಾನ್ಯರಿಗೆ ಅನಿವಾರ್ಯವಾಗಿದ್ದ ‘ಅಕ್ಷರ-ಅನ್ನ-ಜ್ಞಾನ’ವನ್ನು ಸಮಾಜದ ಎಲ್ಲಾ ಸ್ತರದ ಜನತೆಗೆ ನಿರಂತರ ಎಂಟು ದಶಕಗಳ ಕಾಲ ಅವ್ಯಾಹತವಾಗಿ ನೀಡಿದ ಪೂಜ್ಯರು ಶತಮಾನದ ಯುಗ ಪುರುಷರೇ ಸರಿ.
ಅರ್ಹವಾಗಿಯೇ ಉತ್ತರಾಯಣದ ಸೋಮವಾರದ ಪುಣ್ಯ ದಿನದಂದು ಶ್ರೀಗಳು ಭಗವಂತನ ಸಾನಿಧ್ಯವನ್ನು ಬಯಸಿ ಇಹಲೋಕದ ಸಾರ್ಥಕ ಯಾತ್ರೆಯನ್ನು ಮುಗಿಸಿದ್ದಾರೆ. ಸಮಾಜದ ಎಲ್ಲಾ ಮನೆ-ಮನಗಳಲ್ಲೂ ಅವರ ತತ್ವಾದರ್ಶಗಳು ತುಂಬಿರಲಿ, ದಿವ್ಯ ದೃಷ್ಠಿಯಿಂದ ಹೊರಹೊಮ್ಮುತ್ತಿದ್ದ ಶ್ರೀಗಳ ಕೃಪಾಶೀರ್ವಾದ ನಿರಂತರ ನಮ್ಮ ಮೇಲಿರಲಿ ಎಂದು ಶಾಸಕರು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.