ಕಾಪು, ಅ 25: ಮೂಳೂರಿನ ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿ 7 ಕರು, ಒಂದು ಹಸು ಹಾಗೂ ಒಂದು ಮಹಿಂದ್ರಾ ಪಿಕಪ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66 ರ ಮೂಳೂರು ಸುನ್ನಿ ಸೆಂಟರ್ ಬಳಿ ಅಕ್ರಮ ಕಸಾಯಿ ಖಾನೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕಾಪು ಪೊಲೀಸರು ಅ. 25 ರ ಬುಧವಾರ ಬೆಳಗ್ಗಿನ ಜಾವ ಎರಡು ಗಂಟೆಗೆ ದಾಳಿ ನಡೆಸಿದ್ದಾರೆ. ಅ. ೨೫ ರ ಬುಧವಾರ ಮುಂಜಾನೆ ಕಾಪು ಠಾಣಾಧಿಕಾರಿ ನಿತ್ಯಾನಂದ ಗೌಡ ಹಾಗೂ ಅವರ ತಂಡ ದಾಳಿ ಮಾಡಿದ್ದು ಈ ಸಂದರ್ಭ ಕಾಸಾಯಿಖಾನೆ ಮಾಲೀಕ ಎಂ.ಎ ಅಬ್ಬು (60) ಹಾಗೂ ಅವರ ಮಗ ಇಸ್ಮಾಯಿಲ್ (38) ರನ್ನು ಪೊಲೀಸರು ಬಂಧಿಸಿದ್ದಾರೆ .ದಾಳಿಯಲ್ಲಿ 5 ದನಗಳ ಚರ್ಮ ಪತ್ತೆ ಆಗಿದ್ದೂ ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ . ಆತನ ಪತ್ತೆಗಾಗಿ ಹುಡುಕಾಟ ನಡೆಯುತ್ತಿದ್ದು ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.