ಮಂಗಳೂರು, ಜು 10 (DaijiworldNews/HR): ಕಂದಾಯ ಸಚಿವ ಆರ್ ಅಶೋಕ್ ಅವರು ತಮ್ಮ ಇನ್ಟಾಗ್ರಾಮ್ನಲ್ಲಿ ಸುಳ್ಯದ ಕಡಲ್ಗೊರೆತ ಆದ ಪ್ರದೇಶಗಳಿಗೆ ಭೇಟಿ ನೀಡಿದೆ ಎಂದು ಬರೆಯುವ ಮೂಲಕ ಟ್ರೋಲ್ ಗೆ ಒಳಗಾಗಿದ್ದಾರೆ.
ಅಶೋಕ್ ಅವರು ತಮ್ಮ ಇನ್ಟಾಗ್ರಾಮ್ನಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಕಡಲ್ಗೊರೆತ ಆದ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ಮಾಡಿ, ಪರಿಹಾರ ಕಾರ್ಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು ಎಂದು ಬರೆದುಕೊಂಡಿದ್ದರು. ಸಚಿವರು ಉಳ್ಳಾಲದ ಬದಲು ಸುಳ್ಯದಲ್ಲಿ ಕಡಲ್ಕೊರೆತ ಎಂದು ಉಲ್ಲೇಖಿಸಿರುವುದು ಟ್ರೋಲ್ಗೆ ಕಾರಣವಾಗಿತ್ತು. ಇದಕ್ಕೆ ಹಾಸ್ಯಾಸ್ಪದ ರೀತಿಯಲ್ಲಿ ಅನೇಕ ಕಾಮೆಂಟ್ ಗಳು ಬಂದಿದೆ.
ಇನ್ನು ಸುಳ್ಯದಲ್ಲಿ ಸಮುದ್ರವೇ ಇಲ್ಲ ಆದರೇ ಹೇಗೆ ಕಡಲ್ಗೊರೆತ ಆಯಿತು ಎಂದು ಅನೇಕ ಮಂದಿ ಕಾಮೆಂಟ್ ನಲ್ಲಿ ಹೇಳಿದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ಕಡಲ್ಗೊರೆತ ಆದ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ಮಾಡಿ, ಪರಿಹಾರ ಕಾರ್ಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು ಎಂದು ಬರೆದಿದ್ದಾರೆ.