ಉಡುಪಿ, ಜು 10 (DaijiworldNews/HR): ಕೊಂಕಣ ರೈಲ್ವೇಯಲ್ಲಿ ಉದ್ಯೋಗಿಯಾಗಿದ್ದ ಮಂಗಳದಾಸ್ ನಾಯ್ಕ್ (51) ಅವರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ರೈಲಿನಲ್ಲಿಯೇ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ.
ಮಂಗಳದಾಸ್ ಜುಲೈ 8 ರಂದು ನೇತ್ರಾವತಿ ಎಕ್ಸ್ಪ್ರೆಸ್ ರೈಲಿನಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು. ಬೆಳಗಿನ ಜಾವ 3.20 ರ ಸುಮಾರಿಗೆ ಅವರಿಗೆ ತೀವ್ರ ದಣಿವು ಕಾಣಿಸಿಕೊಂಡಿದ್ದು, ಅವರು ತಮ್ಮ ಸಹೋದ್ಯೋಗಿ ವಿವೇಕ್ ಆರ್ ಗವಾಸ್ಗೆ ವಿಷಯವನ್ನು ತಿಳಿಸಿ ಚಾಲನೆಯಲ್ಲಿರುವ ರೈಲಿನಲ್ಲಿಯೇ ವಿಶ್ರಾಂತಿ ತೆಗೆದುಕೊಳ್ಳಲು ಹೋಗಿದ್ದರು.
ಇನ್ನು ರೈಲು ಮುಂಜಾನೆ 4.30ಕ್ಕೆ ಇಂದ್ರಾಳಿ ರೈಲು ನಿಲ್ದಾಣ ತಲುಪಿತು. ವಿವೇಕ್ ಮಂಗಳದಾಸ್ ನನ್ನು ತಪಾಸಣೆಗೆ ಒಳಪಡಿಸಿದಾಗ ಅವರು ಪ್ರಜ್ಞಾಹೀನನಾಗಿದ್ದು, ಕೂಡಲೇ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.