ಮಂಗಳೂರು,ಜ 21(MSP): 23 ವರ್ಷದ ಕ್ರೈಸ್ತ ಸನ್ಯಾಸಿನಿಯೊಬ್ಬರು ಹೃದಯ ಸ್ತಂಭನದಿಂದ ಸಾವನಪ್ಪಿದ ಅಘಾತಕಾರಿ ಘಟನೆ ಜ 21 ರ ಸೋಮವಾರ ಬಿಜೈ ನಲ್ಲಿ ನಡೆದಿದೆ.
ಮೃತಪಟ್ಟವರನ್ನು ಸಿಸ್ಟರ್ ರೇಷ್ಮಾ ಡಿಸೋಜಾ (23) (ಯುಎಫ್ಎಸ್) ಎಂದು ಗುರುತಿಸಲಾಗಿದೆ. ಇವರು ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ದ್ವಿತೀಯ ಬಿ.ಎ ವಿದ್ಯಾರ್ಥಿನಿಯಾಗಿದ್ದರು.
ಬಿಜೈ ಕಾನ್ವೆಂಟ್ ನಲ್ಲಿದ್ದ ವಾಸವಾಗಿದ್ದ ಇವರನ್ನು ಇಂದು ಮುಂಜಾನೆ ನಿತ್ಯದ ಪ್ರಾರ್ಥನೆಗಾಗಿ ಸಹಪಾಠಿಗಳು ಕರೆದಾಗ ಪ್ರತಿಕ್ರಿಯಿಸಲಿಲ್ಲ. ಈ ಹಿನ್ನಲೆಯಲ್ಲಿ ತಕ್ಷಣ ಅವರನ್ನು ಕಂಕನಾಡಿಯಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ , ವೈದ್ಯರು ಆದಾಗಲೇ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಇವರ ಅಂತ್ಯಕ್ರಿಯೆ ನಾಳೆ ಜೆಪ್ಪುವಿನಲ್ಲಿರುವ ಹೋಲಿ ರೋಸರಿ ಕಾನ್ವೆಂಟ್ನಲ್ಲಿ ಸಂಜೆ ಜರುಗಲಿದೆ.