ಧರ್ಮಸ್ಥಳ ಅ 25: ತುಳು ಭಾಷೆಯನ್ನು 8 ನೇ ಪರಿಚ್ಚೇದಕ್ಕೆ ಸೇರ್ಪಡೆಯಾಗಬೇಕೆಂಬ ತುಳು ಜನರ ಬೇಡಿಕೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಳಿ ಪ್ರಸಾಪಿಸುತ್ತೇನೆ ಎಂದು ಡಾ. ಡಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಅವರ ಪಟ್ಟಾಭೀಷೇಕಕದ 50 ನೇ ವರ್ಧಂತ್ಯುತ್ಸವ ಸಮಾರಂಭದಲ್ಲಿ ಭಾಗಿಯಾಗಿ ಅ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.
ಇಲ್ಲಿ ನಡೆದ ಅದ್ದೂರಿ ಪಟ್ಟಾಭಿಷೇಕ ಸಮಾರಂಭದ ಅಧ್ಯಕ್ಷರಾಗಿ ಮೈಸೂರು ಅರಮನೆಯ ಮಹಾರಾಜರಾದ ಯದುವೀರದತ್ತ ಒಡೆಯರ್ ಅವರು ಪಾಲ್ಗೊಂಡಿದ್ದರು. ಆ ಬಳಿಕ ಮಾತನಾಡಿದ ಅವರು ವೀರೇಂದ್ರ ಹೆಗ್ಗಡೆ ಹಾಗೂ ಧರ್ಮಸ್ಥಳ ಸೇವೆಯಿಂದಲೆ ಗುರುತಿಸಲ್ಪಟ್ಟಿದೆ ಎಂದರು. ಮೈಸೂರು ಹಾಗೂ ಧರ್ಮಸ್ಥಳದ ಜತೆಗಿನ ನಂಟನ್ನು ಮೆಲುಕು ಹಾಕಿದರು. ದೇವಸ್ಥಾನದ ಬಳಕೆಗೆ ಶ್ರೀಗಂಧವನ್ನು ಮೈಸೂರಿನಿಂದಲೇ ಪೂರೈಕೆ ಮಾಡುತ್ತಿದ್ದ ವಿಷಯವನ್ನೂ ಪ್ರಸ್ತಾಪಿಸಿದರು. ಕಾರ್ಯಕ್ರಮದಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ, ಶಾಸಕ ಅಭಯಚಂದ್ರ ಜೈನ್,ಡಿ.ಸುರೇಂದ್ರ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.