ಉಡುಪಿ,ಜ 21(MSP): ಈ ವರ್ಷದಲ್ಲಿ ಬರುವ ಹುಣ್ಣಿಮೆಗಳಲ್ಲಿ ಮೂರು ಹುಣ್ಣಿಮೆ ಚಂದ್ರ ಸೂಪರ್ ಮೂನ್ಗಳಾಗಿ ಗೋಚರಿಸಲಿದ್ದು, ಸೋಮವಾರ ಮೊದಲ ಸೂಪರ್ ಮೂನ್ ಕಾಣಿಸಲಿದೆ ಎಂದು ಖಗೋಳ ತಜ್ಞ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.
ಆದರೆ ಜನವರಿ 21ರ ಸೂಪರ್ ಮೂನ್ ಉತ್ತರ ಮತ್ತು ದಕ್ಷಿಣ ಅಮೆರಿಕ ಹಾಗೂ ಯುರೋಪ್ಗಳಲ್ಲಿ ಮಾತ್ರ ಗೋಚರಿಸಲಿದ್ದು ಭಾರತದಲ್ಲಿ ಮಾತ್ರ ಇದರ ದರ್ಶನ ಭಾಗ್ಯ ಇರುವುದಿಲ್ಲ.
ಮೂರು ಹುಣ್ಣಿಮೆಗಳಲ್ಲಿ ಚಂದ್ರ ಸುಮಾರು 14 ಅಂಶ ದೊಡ್ಡದಾಗಿ ಕಾಣಲಿದ್ದಾರೆ. ಭೂಮಿಗೂ ಚಂದ್ರನಿಗೂ ಸರಾಸರಿ 3,84000 ಕಿಮೀ ದೂರವಿದ್ದು, ಸೋಮವಾರ ಚಂದ್ರನು ಭೂಮಿಯಿಂದ ಸುಮಾರು 3,57,715 ಕಿಮೀ ದೂರದಲ್ಲಿ ಕಾಣಿಸಿಕೊಳ್ಳಲಿದ್ದಾನೆ. ಫೆಬ್ರುವರಿ 19ರಂದು ,56,846 ಕಿ.ಮೀ ಹಾಗೂ ಮಾರ್ಚ್ 21 ರಂದು 3,60,772 ಕಿಮೀ ದೂರದಲ್ಲಿ ಹುಣ್ಣಿಮೆ ಚಂದ್ರ ಕಾಣಲಿದ್ದಾರೆ.