ಬೆಂಗಳೂರು,ಜ 20(MSP): ಈಗಲ್ಟನ್ ರೆಸಾರ್ಟ್ನಲ್ಲಿ ಬೀಡುಬಿಟ್ಟಿರುವ ಕಾಂಗ್ರೆಸ್ ನಾಯಕರ ನಡುವೆ ಭಿನ್ನಾಪ್ರಾಯ ಮೂಡಿದ್ದು ಕಾಂಗ್ರೆಸ್ ಶಾಸಕರಿಬ್ಬರು ಕೈ-ಕೈ ಮಿಲಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ರಾತ್ರಿ ಪಾರ್ಟಿ ಮುಗಿಸಿ, ಶಾಸಕರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಲುಪಿ ಪರಸ್ಪರ ಹಲ್ಲೆ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ . ಆದರೆ ಇದೆಲ್ಲವನ್ನು ನಿರಾಕರಿಸಿರುವ ಸಚಿವ ಡಿ.ಕೆ.ಶಿವಕುಮಾರ್ ಬಳ್ಳಾರಿ ಶಾಸಕರ ನಡುವೆ ಯಾವುದೇ ರೀತಿಯ ಜಗಳವಾಗಿಲ್ಲ. ನಮ್ಮ ಶಾಸಕರಲ್ಲಿ ಯಾವುದೇ ಮನಸ್ತಾಪ ಇಲ್ಲ. ಬಾಟ್ಲಿಯಲ್ಲಿ ಹೊಡೆದಾಡಿಕೊಂಡಿಲ್ಲ ಶನಿವಾರ ಬೇರೆ ಅಲ್ವಾ ಎಂದ ಅವರು ಆನಂದ್ ಸಿಂಗ್ ಕುಟುಂಬದವರ ಜೊತೆ ಮದುವೆಗೆ ಹೋಗಿದ್ದಾರೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.
ಆದರೆ ಅತ್ತ ಕಡೆ ಭಾನುವಾರ 7 ಗಂಟೆಗೆ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಶಾಸಕ ಆನಂದ ಸಿಂಗ್ ದಾಖಲಾಗಿದ್ದಾರೆ. ಅಪೋಲೋ ಆಸ್ಪತ್ರೆಯ 6ನೇ ಮಹಡಿಯ 6002 ಕೊಠಡಿಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಬೆಂಗಳೂರಿನ ಅಪೋಲೋ ಆಸ್ಪತ್ರಗೆ ಬಿಗು ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ. ಇವರನ್ನು ಸಂಸದ ಡಿ.ಕೆ.ಸುರೇಶ್ ಆಸ್ಪತ್ರಗೆ ಭೇಟಿ ನೀಡಿದ್ದಾರೆ.
ಒಟ್ಟಾರೆ ಆನಂದ್ ಸಿಂಗ್ ಆಸ್ಪತ್ರೆ ಗೆ ದಾಖಲಾಗಿದ್ದು ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ.