ಮಣಿಪಾಲ, ಜು 06 (DaijiworldNews/MS): ತಿಂಡಿ ತಿಂದ ಬಿಲ್ ಪಾವತಿಸಲು ಹೇಳಿದ ಹೊಟೇಲ್ ಮಾಲಕರಿಗೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿ ಪಿಸ್ತೂಲ್ ನಂತಹ ವಸ್ತು ತೋರಿಸಿ ಜೀವ ಬೆದರಿಕೆಯೊಡ್ಡಿರುವ ಘಟನೆ ಮಣಿಪಾಲದಲ್ಲಿ ಮಂಗಳವಾರ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಕಾರ್ಕಳದ ಮುಹಮ್ಮದ್ ಅನ್ವರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮಣಿಪಾಲದಲ್ಲಿರುವ ಭಟ್ಕಳ ಮುರ್ಡೇಶ್ವರದ ಹಬೀಬುಲ್ಲಾ ಎಂಬವರ ಹೋಟೆಲ್ ಗೆ ಕಾರಿನಲ್ಲಿ ಬಂದಿದ್ದ ಆರೋಪು ಅನ್ವರ್, ಹಣವನ್ನು ಪಾವತಿಸದೇ ಕಾರಿನ ಬಳಿ ಹೋದಾಗ , ಈ ವೇಳೆ ಬಿಲ್ ಪಾವತಿಸುವಂತೆ ಸೂಚಿಸಿದ ಮಾಲಕ ಹಬೀಬುಲ್ಲಾಗೆ, ಅನ್ವರ್ ಕೈಯಿಂದ ಹೊಡೆದು ಅಡ್ಡಗಟ್ಟಿ ಪಿಸ್ತೂಲ್ ತರಹ ಇರುವ ಒಂದು ವಸ್ತುವನ್ನು ತೋರಿಸಿ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಹೇಳಲಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.