ಉಳ್ಳಾಲ, ಜ 20(MSP): ತೊಕ್ಕೊಟ್ಟು ಜಂಕ್ಷನ್ ನಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ಅಪರಿಚಿತ ವಾಹನ ಢಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಶನಿವಾರ ಸಂಭವಿಸಿದೆ.
ರಾಣಿಪುರ ಸಂತೋಷನಗರ ನಿವಾಸಿ ರತ್ನಾಕರ್ ಅವರ ಪತ್ನಿ ಜಯಂತಿ (67) ಅವರು ತೊಕ್ಕೊಟ್ಟು ಬ್ಯಾಂಕಿಗೆ ತೆರಳುತ್ತಿದ್ದಾಗ ರಾ.ಹೆ.66ರಲ್ಲಿ ವಾಹನ ಢಿಕ್ಕಿ ಹೊಡೆದಿದೆ. ಪರಿಣಾಮ ಅವರು ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರು ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕಿರಿಯ ಪುತ್ರ ಮಿಥುನ್ ಅವರು ಶನಿವಾರ ಬೆಳಗ್ಗೆ ದುಬಾೖಗೆ ಹೊರಟಿದ್ದರು. ಅಪಘಾತ ಸಂಭವಿಸುವ ಹೊತ್ತಿಗೆ ಅವರು ಬೆಂಗಳೂರು ತಲುಪಿದ್ದು, ಅಲ್ಲಿಂದ ವಾಪಸಾಗಿದ್ದಾರೆ.
ಅಪಘಾತ ನಡೆಸಿದ ವಾಹನದ ಸುಳಿವು ಸಿಸಿಟಿವಿ ಮೂಲಕ ಪತ್ತೆಯಾಗಿದೆ. ನಾಗುರಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಾಹನದ ಹುಡುಕಾಟ ಆರಂಭಿಸಿದ್ದಾರೆ.