ಸುಳ್ಯ, ಜು 05 (DaijiworldNews/HR): ಸುಳ್ಯ ತಾಲೂಕಿನ ಕೊಳ್ತಿಗೆ ಗ್ರಾಮದ ಕುದ್ಕುಳಿ ಎಂಬಲ್ಲಿರುವ ಮಹಮ್ಮದ್ ಶಾಫಿ ಎಂಬವರ ತೋಟದಲ್ಲಿರುವ ಗೋದಾಮಿನಿಂದ 10 ಗೋಣಿ ಜೀಲದಲ್ಲಿ ತುಂಬಿಸಿಟ್ಟಿರುವ 250 ಕೆ.ಜಿ ಕಾಳು ಮೆಣಸನ್ನು ಕಳವು ಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಜಾಲ್ಸೂರಿನ ಮಂಜು ಬಿ, ಪ್ರವೀಣ, ಪವನ್ ಕುಮಾರ್, ಅಬ್ದುಲ್ ಬಾಶೀತ್ ಎಂದು ಗುರುತಿಸಲಾಗಿದೆ.
ಆರೋಪಿ ಪವನ್ ಕುಮಾರನ ಮನೆಯಲ್ಲಿ ಕಳವು ಮಾಡಿ ಬಚ್ಚಿಟ್ಟಿದ್ದ 10 ಗೋಣಿ ಕಾಳು ಮೆಣಸನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದು, ಅದರ ಮೌಲ್ಯ ರೂ 118750 ಮತ್ತು ಕಾಳು ಮೆಣಸು ಸಾಗಾಟ ಮಾಡಲು ಉಪಯೋಗಿಸಿ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇನ್ನು ಈ ಪ್ರಕರಣದಲ್ಲಿ ಇನ್ನೊಬ್ಬ ಅಪ್ರಾಪ್ತ ಬಾಲಕನು ಭಾಗಿಯಾಗಿದ್ದು, ಆರೋಪಿಗಳಾದ ಮಂಜು ಬಿ, ಪ್ರವೀಣ, ಪವನ್ ಕುಮಾರ್, ಅಬ್ದುಲ್ ಬಾಶೀತ್ ರವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ದ.ಕ ಪೊಲೀಸ್ ಅಧೀಕ್ಷಕರಾದ ಸೋನಾವಣೆ ರಿಷಿಕೇಶ್, ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರ ಹಾಗೂ ಪುತ್ತೂರು ಉಪವಿಬಾಗದ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನಾ ಕುಮಾರಿ ಪಿ ರವರ ಆದೇಶದಂತೆ ನವೀನ್ಚಂದ್ರ ಜೋಗಿ ಪೊಲಿಸು ವೃತ್ತ ನಿರೀಕ್ಷಕರು ಸುಳ್ಯ ರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ರುಕ್ಮ ನಾಯ್ಕ್ ಹಾಗೂ ಸಿಬ್ಬಂದಿ ಗಳಾದ ಎಎಸ್ಐ ನಾರಾಯಣ, ಹೆಚ್ಸಿ 547 ಬಾಲಕೃಷ್ಣ, ಹೆಚ್ಸಿ 571 ನವೀನ್, ಹೆಚ್ಸಿ 506 ಸತೀಶ, ಪಿಸಿಗಳಾದ ಮಂಜುನಾಥ, ಚಂದ್ರಶೇಖರ, ಪ್ರವೀಣ ಕಮಾರ್, ಶ್ರೀಶೈಲ, ಮಂಜುನಾಥ ಹೆಚ್ ಜೆ ಹಾಗೂ ವಾಹದ ಚಾಲಕರಾದ ಪುರಂದರ ರವರು ಭಾಗವಹಿಸಿದ್ದು, ಜಿಲ್ಲಾ ಗಣಕಯಂತ್ರದ ದಿವಾಕರ ಹಾಗೂ ಸಂಪತ್ ಆರೋಪಿಗಳ ಪತ್ತೆಗೆ ಸಹಕರಿಸಿರುತ್ತಾರೆ.