ಕಾರ್ಕಳ, ಜು 04 (DaijiworldNews/HR): ಕಾರ್ಕಳ ಪುರಸಭೆಯ ವಿಶೇಷ ಸಭೆಯು ಪತ್ರಕರ್ತರಿಗೆ ಆಹ್ವಾನ ನೀಡದ ಅಧಿಕಾರಿಗಳು ಮತ್ತು ಅಧ್ಯಕ್ಷರನ್ನು ತರಾಟೆಗೆ ತೆಗೆದಕೊಂಡ ವಿರೋಧ ಪಕ್ಷದ ಸದಸ್ಯ ಶುಭದ ರಾವ್ ವಿಶೇಷ ಸಭೆಯನ್ನು ಮುಂದೂಡುವಂತೆ ಸಲಹೆ ನೀಡಿದರು.
ವಿಶೇಷ ಸಭೆಯನ್ನು ಕರೆದಿರುವುದು ಕಾರ್ಕಳ ಉತ್ಸವದ ಲೆಕ್ಕಪತ್ರ ಹಾಗೂ ಲೆಕ್ಕಪತ್ರದ ಬಗ್ಗೆ ಇರುವಂತಹ ಸಂಶಯಗಳನ್ನು ದೂರೀಕರಿಸುವ ಉದ್ದೇಶದಿಂದ ಆದರೆ ಪತ್ರಕರ್ತರಿಗೆ ಸಬೆಗೆ ಆಹ್ವಾನ ನೀಡದೇ ಇರುವುದು ಜನ ಸಮಾನ್ಯರಲ್ಲಿ ಸಂಶಯಕ್ಕೆ ಎಡೆಮಾಡುವಂತಾಗುತ್ತದೆ ನಮ್ಮ ಪ್ರತಿಯೊಂದು ಮಾತುಗಳು ಕೂಡ ಜನರಿಗೆ ತಿಳಿಯಬೇಕು. ನಾವು ಜನರಿಗೆ ಪತ್ರಕರ್ತರ ಮೂಲಕ ನಮ್ಮ ಕೆಲಸ ಕಾರ್ಯಗಳ ವಿವರವನ್ನು ಮುಟ್ಟಿಸಲಾಗುತ್ತದೆ ಅದ್ದರಿಂದ ಸಭೆಯನ್ನು ಮುಂದೂಡಬೇಕೆಂದು ಪಟ್ಟು ಹಿಡಿದರು. ಇದಕ್ಕೆ ಪ್ರತಿಪಕ್ಷ ಸದಸ್ಯರಾದ ಪ್ರತಿಮಾ , ಪ್ರಭಾ, ರೆಹಮತ್ ಎನ್ ಶೇಕ್, ಹರೀಶ್ ದೇವಾಡಿಗ, ಸೋಮನಾಥ ನಾಯ್ಕ, ಪ್ರವೀಣ್ ಶೆಟ್ಟಿ ಧ್ವನಿಗೂಡಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷೆ ಹಾಗೂ ಅಧಿಕಾರಿಗಳು ಪತ್ರಕರ್ತರಿಗೆ ಪೋನ್ ಮುಖಾಂತರ ಸಂಪರ್ಕಿಸಿದರೂ ಕೊನೆ ಕ್ಷಣದ ಮಾಹಿತಿಯಿಂದಾಗಿ ಪತ್ರಕರ್ತರಿಗೆ ಸಭೆಯಲ್ಲಿ ಭಾಗವಹಿಸಲು ನಿರಾಕರಿಸಿದ ಕಾರಣ ಸಭೆಯಲ್ಲಿ ಹಾಜರಿದ್ದ ಮಂಗಳೂರಿನ ಜಳಚರಂಡಿ ಮಂಡಳಿ ಅಧಿಕಾರಿಗಳಿಗೆ ಮಳೆಗಾಲದಲ್ಲಿ ಕಾರ್ಕಳ ದ ಮುಖ್ಯ ರಸ್ತೆಯ ಒಳಚರಂಡಿ ಅವ್ಯವಸ್ಥೆಯ ಬಗ್ಗೆ ಮಾಹಿತಿಯನ್ನು ನೀಡಿ ಸಭೆಯನ್ನು ಮುಂದೂಡಲಾಯಿತು .
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷೆ ಸುಮಾ ಕೇಶವ, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಸ್ಥಾಯೀ ಸಮಿತಿ ಅಧ್ಯಕ್ಷ ಯೋಗೀಶ್ ದೇವಾಡಿಗ, ಸದಸ್ಯರುಗಳಾದ ಪ್ರದೀಪ್ ಮಾರಿಗುಡಿ, ಶೋಭಾ ದೇವಾಡಿಗ, ಇತರ ಸದಸ್ಯರು ಉಪಸ್ಥಿತರಿದ್ದರು.