ಮಂಗಳೂರು,ಜು 04 (DaijiworldNews/HR): ಕಳೆದ ಮೂರು ದಿನಗಳಿಂದ ಪೌರ ಕಾರ್ಮಿಕರ ಪ್ರತಿಭಟನೆ ನಡೆಸುತ್ತಿದ್ದು, ನಗರವೆಲ್ಲ ಕಸದಿಂದ ತುಂಬಿ ತುಳುಕುತ್ತಿದ್ದು ಗಬ್ಬು ನಾರುತ್ತಿದೆ.
ತ್ಯಾಜ್ಯ ಸಂಗ್ರಹದ ವಾಹನ ಚಾಲಕರು, ಕಾರ್ಲಿಕರು ವಿವಿಧ ಬೇಡಿಕೆ ಈದೇರಿಕೆಗಾಗಿ ರಾಜ್ಯವ್ಯಾಪಿ ಮೂರು ದಿನದಿಂದ ಪ್ರತಿಭಟನೆ ನಡೆಸುತ್ತಿದ್ದು, ಮಂಗಳೂರಿನ ನಗರಾದ್ಯಂತ ತ್ಯಾಜ್ಯ ಸಾಗಾಟ, ನಿರ್ವಹಣೆ ಮೂರು ದಿನಗಳಿಂದ ಸಂಪೂರ್ಣ ಸ್ಥಗಿತಗೊಂಡಿದ್ದು, ಇಂದು ಬೆಳ್ಳಿಗ್ಗೆ ಕುದ್ರೋಳಿ ಪರಿಸರದಲ್ಲಿ ಕಸ ತುಂಬಿ ತುಳುಕುತ್ತಿದ್ದು ಗಬ್ಬು ನಾರುತ್ತಿದೆ.
ನಗರದ ಮನೆ, ಪ್ಲ್ಯಾಟ್ ಗಳ ಎದುರು ಹಸಿ ಹಾಗೂ ಒಣ ತ್ಯಾಜ್ಯ ರಾಶಿಯೇ ಸಂಗ್ರಹವಾಗಿದ್ದು, ಮಳೆ ನೀರು ಹಾಗೂ ಕಸದ ರಾಶಿ ಮಿಶ್ರಣವಾಗಿ ಕೆಲವು ಕಡೆಗಳಲ್ಲಿ ಗಬ್ಬು ನಾರುತ್ತಿದ್ದು, ಜನ ನಡೆದಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.