ಬಂಟ್ವಾಳ, ಜೂ 02 (DaijiworldNews/HR): ಸರಕಾರದ ಚಿಂತನೆಗೆ ಪೂರಕವಾಗಿ ಬಂಟ್ವಾಳ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪೆರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶನಿವಾರ 1.27 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿದ ಬಳಿಕ ಶಾಸಕರು ಮಾತನಾಡಿದ ಅವರು, ಕ್ಷೇತ್ರದ ಜನರ ಸಹಕಾರದಿಂದಾಗಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಸಾಧ್ಯವಾಗಿದೆ ಎಂದ ಅವರು ಮತದಾರರು ನನ್ನ ಮೇಲಿಟ್ಟಿರುವ ಪ್ರೀತಿ,ವಿಶ್ವಾಸಕ್ಕೆ ಚ್ಯುತಿಬಾರದಂತೆಯು ಮುಂದಿನ ದಿನದಲ್ಲು ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಬಂಟ್ವಾಳ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅವಧಿಯಲ್ಲಿ 1400 ರಸ್ತೆಗಳನ್ನು ಅಭಿವೃದ್ದಿ ಗೊಳಿಸಲಾಗಿದೆ. ಕೃಷಿಗೆ ಪೂರಕವಾಗಿ ಅಲ್ಲಲ್ಲಿ ಸುಮಾರು 18 ಚೆಕ್ ಡ್ಯಾಂ ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.ಜಲಜೀವನ್ ಯೋಜನೆಯಡಿ ಪ್ರತಿ ಮನೆಗೂ ಕುಡಿಯುವ ನಳ್ಳಿನೀರು ಪೂರೈಕೆಯ ಕಾಮಗಾರಿ ಅನುಷ್ಠಾನಗೊಂಡಿದೆ ಎಂದರು.
ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಯನ್ನು ಖಾಸಗಿ ಆಸ್ಪತ್ರೆಯನ್ನು ಮೀರಿಸುವ ರೀತಿಯಲ್ಲಿ ಸುಸಜ್ಜಿತ ಗೊಳಿಸಲಾಗಿದೆ.ಶೀಘ್ರದಲ್ಲೆ ಪುಂಜಾಲಕಟ್ಟೆ ಆರೋಗ್ಯ ಕೇಂದ್ಮೇಲ್ದರ್ಜೆಗೇರಲಿದ್ದು, ಬಂಟ್ವಾಳದ ಜಕ್ರಿಬೆಟ್ಟುವಿನಲ್ಲಿ 135 ಕೋ.ರುಇ.ವೆಚ್ಚದಲ್ಲಿ ಸೇತುವೆ ಮತ್ತು ರಸ್ತೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು, ಅತೀ ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದ ಶಾಸಕರು ಸುಮಾರು 184 ಧಾರ್ಮಿಕ ಕೇಂದ್ರಗಳಿಗೆ ಸಂಪರ್ಕರಸ್ತೆ ಕಲ್ಪಿಸಿ ಅಭಿವೃದ್ಧಿ ಪಡಿಸಲಾಗಿದೆ ಎಂದರು.
ಪೆರಾಜೆ ಗ್ರಾ.ಪಂ.ಅಧ್ಯಕ್ಷೆ ರೋಹಿಣಿ, ಗ್ರಾ. ಪಂ. ಸದಸ್ಯರಾದ ಹರೀಶ್ ಶೆಟ್ಟಿ ಪಾಣೂರು, ಶಶಿಕುಮಾರಿ, ಮಮತಾ ಗೌಡ, ರಾಜಾರಾಮ್ ಕಾಡೂರು, ಕಡೇಶಿವಾಲಯ ಗ್ರಾ.ಪಂ.ಅಧ್ಯಕ್ಷ ಸುರೇಶ್ ಬನಾರಿ, ಪಕ್ಷದ ಪ್ರಮುಖರಾದ ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ, ಬಿ.ಟಿ.ನಾರಾಯಣ ಭಟ್, ರಮನಾಥ ರಾಯಿ, ಆನಂದ ಎ.ಶಂಭೂರು, ವಜ್ರನಾಥ್ ಕಲ್ಲಡ್ಕ, ಗಣೇಶ್ ರೈ ಮಾಣಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಮೋಹನ್ ಪಿಎಸ್, ಚಿದಾನಂದ ಕಲ್ಲಡ್ಕ, ಅಶ್ವಥ್ ಬರಿಮಾರು, ಯಶೋಧರ ಕರ್ಬೆಟ್ಟು, ಸತೀಶ್ ಶೆಟ್ಟಿಮೊಡಂಕಾಪು, ಸುಪ್ರೀತ್ ಆಳ್ವ , ತನಿಯಪ್ಪ ಗೌಡ, ಸನತ್ ಕುಮಾರ್ ರೈ,ದಿವಾಕರ ಭಂಡಾರಿ ಶಂಭೂರು, ಶ್ರೀನಿವಾಸ ಪೆರಾಜೆ, ದಿವಾಕರ ಗೌಡ ಶಾಂತಿಲ,ಪಕೀರ ಮೂಲ್ಯ, ನಾರಾಯಣ ಟೈಲರ್, ಮಾದವ ಕುಲಾಲ್, ಕೃಷ್ಣ ಭಟ್ ಮುರ್ಗಾಜೆ , ಶಿವರಾಮ್ ಭಟ್ ಕಾಡೂರು, ನಾರಾಯಣ ಭಟ್ಟ , ನಾರಾಯಣ ಎಂ.ಪಿ.ಪಾಲ್ಯ, ಪಿ.ಡಿ.ಒ.ಸುನಿಲ್ ,ಪ್ರಮುಖರಾದ , ಪೆರಾಜೆ ಗುತ್ತು ಶ್ರೀಕಾಂತ್ ಅಳ್ವ, ಜಯರಾಮ ರೈ ಪೆರಾಜೆ ಗುತ್ತು, ಚಂದ್ರಹಾಸ ಶೆಟ್ಟಿ, ಜಯಾನಂದ ಪೆರಾಜೆ, ಪುರುಷೋತ್ತಮ ಸಾದಿಕುಕ್ಕು, ರಾಘವ ಗೌಡ, ಬಾಲಕೃಷ್ಣ ಪೆರಾಜೆ, ಯತಿರಾಜ್ ಪೆರಾಜೆ , ವಾಮನ ಪೆರಾಜೆ , ಸಂದೇಶ್ ಕುಲಾಲ್, ಲೋಕೇಶ್ ನಾಯ್ಕ್, ಮಹೇಂದ್ರ,.ಜನಾರ್ದನ ಕುಲಾಲ್, ನಾಗೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.