ಕುಂದಾಪುರ, ಜೂ 02 (DaijiworldNews/HR): ಮುಂಗಾರು ವೇಗ ಪಡುತ್ತಿದ್ದಂತೆ ಕಡಲ್ಕೊರತವೂ ಆರಂಭವಾಗಿದೆ. ಮರಂತೆ ನಾವುಂದ ಭಾಗದಲ್ಲಿ ಕಡಲ್ಕೊರೆತ ವ್ಯಾಪಕವಾಗಿದ್ದು ಶನಿವಾರ ಅದು ತೀವ್ರಗೊಂಡು ಕಡಲ ಅಲೆಗಳು ರಸ್ತೆಗೇ ಅಪ್ಪಳಿಸುತ್ತಿವೆ.
ಮರವಂತೆಯ ಹೊರ ಬಂದರು ಪ್ರದೇಶದಲ್ಲಿ ಕಡಲಬ್ಬರ ತೀವ್ರವಾಗಿದೆ. ಕಡಲತಡಿಗೆ ಭಾರೀ ಗಾತ್ರದ ಅಲೆಗಳು ಅಪ್ಪಳಿಸುತ್ತಿದ್ದು, ಆತಂಕ ಮೂಡಿಸುತ್ತಿದೆ. ಈಗಾಗಲೇ ಕಡಲ್ಲಬ್ಬರಕೆ ದಡದಲ್ಲಿನ ತೆಂಗಿನ ಮರಗಳು ನೀರುಪಾಲಾಗಿದೆ. ರಕ್ಕಸಗಾತ್ರದ ಅಲೆಗಳು ಮತ್ತೆ ಮುಂದಕ್ಕೆ ಧಾವಿಸುತ್ತಿವೆ. ಕಡಲ ಅಬ್ಬರ ಹೀಗೆ ಮುಂದುವರಿದರೆ ಸಂಪರ್ಕ ರಸ್ತೆಯೂ ಕೊಚ್ಚಿಕೊಂಡು ಹೋಗುವ ಅಪಾಯವಿದೆ.
ಇಲ್ಲಿ ಹೊರಬಂದರು ನಿರ್ಮಾಣವಾಗುತ್ತಿದ್ದು, ಕಲ್ಲುಗಳ ರಾಶಿ ಹಾಕಲಾಗಿದ್ದರೂ ಕೂಡಾ ಅದನ್ನು ದಾಟಿ ಅಲೆಗಳು ಮುನ್ನುಗ್ಗುತ್ತಿವೆ. ಬೃಹತ್ಗಾತ್ರದ ಅಲೆಗಳಿಗೆ ಜನ ಭಯಬೀತಗೊಂಡಿದ್ದಾರೆ.
ಪ್ರತೀವರ್ಷವೂ ಇಲ್ಲಿ ಕಡಲ್ಕೊರತೆ ಸಹಜ ಪ್ರಕ್ರಿಯೆ. ಯಾವುದೇ ಪರಿಹಾರ ಮಾತ್ರ ಇಲ್ಲಿಯ ತನಕ ಸಿಕ್ಕಿಲ್ಲ. ಶಾಶ್ವತ ಪರಿಹಾರ ಮಾತ್ರ ಇನ್ನೂ ದೊರಕಿಲ್ಲ. ಈ ಭಾಗದ ಕಡಲ್ಕೊರೆತ ಸಾರ್ವಜನಿಕರಿಗೆ ನಿತ್ಯ ಆತಂಕದ ವಿಷಯವಾಗಿ ಪರಿಣಮಿಸಿದೆ.