ಕಾಸರಗೋಡು, ಜೂ 02 (DaijiworldNews/HR): ಎರಡು ದಿನಗಳ ಹಿಂದೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಬೇಡಡ್ಕ ನಿವಾಸಿಯ ಮೃತದೇಹ ಶನಿವಾರ ಸಂಜೆ ತಳಂಗರೆ ಬಂದರು ಸಮೀಪ ಪತ್ತೆಯಾಗಿದೆ.
ಬೇಡಡ್ಕ ಮುಳ್ಳಕೋಡ್ನ ಕೆ.ವಿ ಬಾಲಚಂದ್ರ (57) ಮೃತಪಟ್ಟವರು.
ಗುರುವಾರ ಮಧ್ಯಾಹ್ನ ಹೊಳೆ ದಾಟುತ್ತಿದ್ದಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದು, ನಾಗರಿಕರು, ಅಗ್ನಿ ಶಾಮಕದ ದಳದ ಸಿಬಂದಿಗಳು ಶೋಧ ನಡೆಸಿದ್ದರೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.
ಇದೀಗ ಮೃತದೇಹ ಪತ್ತೆಯಾಗಿದ್ದು, ಮೃತದೇಹವನ್ನು ಮಹಜರು ನಡೆಸಿ ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರ ದಲ್ಲಿರಿಸಲಾಗಿದೆ.