ಮಂಗಳೂರು, ಜ19(SS): ಅಂಗವಿಕಲರು ಮನೆ ನಿರ್ಮಾಣ ಬೇಡಿಕೆ ಮುಂದಿಟ್ಟುಕೊಂಡು ಮುಂದಿನ ದಿನಗಳಲ್ಲಿ ಪಂಚಾಯಿತಿಗೆ ಹೋಗಬೇಕಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.
ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮತನಾಡಿದ ಅವರು, ಅಂಗವಿಕಲರಿಗೆ ಜಿಲ್ಲಾಧಿಕಾರಿ ಮೂಲಕ ಪಟ್ಟಿ ತರಿಸಿ ಮನೆ ನಿರ್ಮಿಸಿ ಕೊಡುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ. ಹೀಗಾಗಿ ಅಂಗವಿಕಲರು ಮನೆ ನಿರ್ಮಾಣ ಬೇಡಿಕೆ ಮುಂದಿಟ್ಟುಕೊಂಡು ಮುಂದಿನ ದಿನಗಳಲ್ಲಿ ಪಂಚಾಯಿತಿಗೆ ಹೋಗಬೇಕಿಲ್ಲ ಎಂದು ತಿಳಿಸಿದ್ದಾರೆ.
ಒಂದು ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕಾದರೆ ಪ್ರತಿ ಮನೆಯಲ್ಲಿ ಇರುವವರು ಆರೋಗ್ಯವಂತರಾಗಿರಬೇಕು. ಇನ್ನೊಬ್ಬರ ಕಾಯಿಲೆ ಕಂಡು ಮರುಕಪಡುವ ಸಂದರ್ಭದಲ್ಲಿ, ಮುಂದೆ ನಮಗೂ ಕಾಯಿಲೆ ಬರಬಾರದು ಎನ್ನುವ ಚಿಂತನೆ ಅಗತ್ಯ. ಅಂಗವಿಕಲರಿಗೆ ನಮ್ಮಂತೆ ಜೀವನ ಕಲ್ಪಿಸಲು ಅವಕಾಶ ನೀಡಬೇಕು. ಅವರಿಗೆ ಪ್ರೀತಿ, ಅನುಕಂಪದ ಅಗತ್ಯವಿದೆ ಎಂದು ಹೇಳಿದ್ದಾರೆ.