ಮಂಗಳೂರು, ಜುಲೈ 01 (DaijiworldNews/SM): ದ.ಕ. ಜಿಲ್ಲೆಯಲ್ಲಿ ಮಳೆಯ ಕಾರಣದಿಂದಾಗಿ ಜುಲೈ ೧ರ ಶುಕ್ರವಾರದಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ರಜೆ ಘೋಷಣೆ ಮಾಡಿದ್ದರು. ಆದರೆ, ಶನಿವಾರದಂದು ಇಲ್ಲಿಯ ತನಕ ಯಾವುದೇ ರಜೆ ಘೋಷಣೆ ಮಾಡಿಲ್ಲ. ಆದರೂ ಕೆಲವು ಕಿಡಿಗೇಡಿಗಳು ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ.
ದೈಜಿವರ್ಲ್ಡ್ ವಾಹಿನಿಯ ಸುದ್ದಿಯನ್ನು ತಿರುಚಿ ಶನಿವಾರವೂ ರಜೆ ಇದೆ ಎಂದು ತಪ್ಪು ಮಾಹಿತಿ ರವಾನಿಸುವ ಪ್ರಯತ್ನ ನಡೆಸಲಾಗುತ್ತಿದೆ. ಕಿಡಿಗೇಡಿಗಳ ಸುಳ್ಳು ಸುದ್ದಿಗಳಿಗೆ ಕಿವಿಗೊಡದಂತೆ ದೈಜಿವರ್ಲ್ಡ್ ಮನವಿ ಮಾಡುತ್ತಿದೆ.
ಅಲ್ಲದೆ, ಸುದ್ದಿ ತಿರುಚಿ ಸಮಾಜಕ್ಕೆ ತಪ್ಪು ಸಂದೇಶ ರವಾನಿಸುವವರನ್ನು ಪತ್ತೆ ಹಚ್ಚುವಂತೆ ಸೈಬರ್ ಠಾಣೆಯ ಮೊರೆ ಹೋಗಲಾಗಿದೆ. ಶೀಘ್ರವೇ ಕಿಡಿಗೇಡಿಗಳ ಬಗ್ಗೆ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ.