ಮಂಗಳೂರು, ಜುಲೈ 01 (DaijiworldNews/SM): ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದ್ರಸ ಇದ್ರ ವಾರ್ಷಿಕ ಮಹಾಸಭೆ ಮಸೀದಿ ಸಭಾಂಗಣದಲ್ಲಿ ನೆರವೇರಿತು.
ಸಭೆಗೆ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದ್ರಸದ ಖತೀಬ್ ಸಫ್ವಾನ್ ಇರ್ಫಾನಿ ದುಅದೊಂದಿಗೆ ಚಾಲನೆ ನೀಡಿದರು. ಬಳಿಕ 2021-22ರ ವಾರ್ಷಿಕ ವರದಿ ಲೆಕ್ಕಪತ್ರ ಮಂಡನೆ ಮಾಡಲಾಯಿತು. ಬಳಿಕ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಮಹಮ್ಮದ್ ಹನೀಫ್ ಮಾತನಾಡಿ, ಮಸೀದಿ ಅಭಿವೃದ್ಧಿ ಕಾರ್ಯದಲ್ಲಿ ಜಮಾಅತ್ ನ ಪ್ರತಿಯೊಬ್ಬರು ಸಹಕರ ನೀಡಿದ್ದು ಮಸೀದಿಯಲ್ಲಿ ವಿವಿಧ ರೀತಿಯ ಯೋಜನೆಗಳನ್ನು ಮಾಡಲಾಗಿದೆ ಮುಂದಿನ ದಿನಗಳಲ್ಲಿ ಜಮಾಅತರು ಇದೇ ರೀತಿಯ ಸಹಕಾರ ನೀಡಬೇಕೆಂದು ಕೇಳಿಕೊಂಡರು.
ಈ ವೇಳೆ ನೂತನ ಆಡಳತ ಮಂಡಳಿಯನ್ನು ಜಮಾಅತರು ಆಯ್ಕೆ ಮಾಡಿದ್ರು. ನೂತನ ಅಧ್ಯಕ್ಷರಾಗಿ ಮಹಮ್ಮದ್ ಇಕ್ಬಾಲ್, ಉಪಾಧ್ಯಕ್ಷ ರಾಗಿ ಇಕ್ಬಾಲ್ ಎ.ಪಿ, ಕಾರ್ಯದರ್ಶಿಯಾಗಿ ಅಹಮ್ಮದ್ ಬಾವ, ಜೊತೆ ಕಾರ್ಯದರ್ಶಿ ಮಹಮ್ಮದ್ ಆರೀಫ್, ಕೋಶಾಧಿಕಾರಿ ಮನ್ಸೂರ್,ಸದಸ್ಯರಾಗಿ ಅಬ್ದುಲ್ ರಝಾಕ್, ಅಬ್ದುಲ್ ಖಾದರ್,ಶಾಹುಲ್ ಹಮೀದ್, ಸಾಜುದ್ದೀನ್, ಇಕ್ಬಾಲ್, ಸೈಫುದ್ದೀನ್,ಸುಲೈಮಾನ್,ಶೇಖಬ್ಬ ಅಯ್ಕೆಯಾದರು. ಈ ವೇಳೆ ಮಸೀದಿ ಮುಅಲ್ಲಿಂ ಜಾಬಿರ್ ಜೌಹರಿ, ಮಹಮ್ಮದ್ ಮುಕ್ರಿ, ಹಾಜಿ ಹನೀಫ್ ಮೌಲವಿ ಮತ್ತಿತರರು ಉಪಸ್ಥಿತರಿದ್ದರು.