ಮಂಗಳೂರು, ಜ 18 (MSP): ’ಬೊಜ್ಜು ಕರಗಿಸಲು ರಮಾನಾಥ ರೈ ಪಾದಯಾತ್ರೆ ನಡೆಸಿದ್ದಾರೆ ’ ಎನ್ನುವ ಹೇಳಿಕೆ ನೀಡಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಮಾಜಿ ಸಚಿವ ರಮಾನಾಥ ರೈ ತಿರುಗೇಟು ನೀಡಿದ್ಧಾರೆ.
ನಗರದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಜ.18 ರ ಮಂಗಳವಾರ ಪತ್ರಿಕಾಗೋಷ್ಟಿ ಮಾತನಾಡಿದ ಅವರು, ಸರ್ಕಾರದ ಎಲ್ಲಾ ಸವಲತ್ತು ಪಡೆದುಕೊಂಡು ಬೊಜ್ಜು ಬೆಳೆಸಿಕೊಂಡಿದ್ದು ಯಾರೆಂದು ಜನರಿಗೆ ತಿಳಿದಿದೆ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದರು.
ಸಂಸದರಿಗೆ ವಾಹನ, ವಿಮಾನ ಪ್ರಯಾಣ ಸೌಲಭ್ಯ ಉಳಿದುಕೊಳ್ಳಲು ಮನೆ ಹೀಗೆ ಎಲ್ಲಾ ಸೌಲಭ್ಯಗಳು ಇದೆ, ಹೀಗಾಗಿ ಕೊಬ್ಬು ಬಂದಿರೋದು ನಮಗಲ್ಲ ಅವರಿಗೆ. ಸಾರ್ವಜನಿಕ ಬದುಕಿನಲ್ಲಿ ಇದ್ದುಕೊಂಡು ಸತ್ಯ ಮಾತನಾಡಬೇಕು, ಹೆದ್ದಾರಿ ಕಾಮಗಾರಿ ತಡವಾಗಲು ಭೂಸ್ವಾಧೀನ ಪ್ರಕ್ರಿಯೆ ಕಾರಣ ಎಂದು ಸಂಸದರು ಆರೋಪಿಸುತ್ತಿದ್ದಾರೆ, ಆದರೆ ನಾನು ಸಚಿವನಾಗಿದ್ದಾಗಲೇ 30 ಹೆಕ್ಟೇರ್ ಭೂಸ್ವಾಧೀನಕ್ಕೆ ಅನುಮತಿ ನೀಡಿದ್ದೆ. ಹೆದ್ದಾರಿ ಕಾಮಗಾರಿ ತಡವಾಗಲು ಸಂಸದರೇ ನೇರ ಕಾರಣ ಎಂದು ಆಪಾದಿಸಿದ ಸಚಿವ ರೈ, ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಕಂಪನಿಗೆ ಹಣ ಪಾವತಿ ಬಾಕಿ ಇರಿಸಿ, ಇದೀಗ ಸಂಸದರು ನಾಟಕವಾಡುತ್ತಿದ್ದಾರೆ ಇದ್ಧಾರೆ ಎಂದು ನಳಿನ್ ವಿರುದ್ಧ ರೈ ತಿರುಗೇಟು ನೀಡಿದ್ಧಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾಜಿ ಮೇಯರ್ ಕವಿತಾ ಸನಿಲ್, ಇಬ್ರಾಹಿಂ ಕೋಡಿಜಾಲ್, ಪಾಲಿಕೆ ಸದಸ್ಯ ಶಶಿಧರ್ ಹೆಗ್ಡೆ, ನವೀನ್ ಡಿ’ಸೋಜಾ ಮುಂತಾದವರು ಉಪಸ್ಥಿತರಿದ್ದರು.