ಗುಜರಾತ್, ಜ 18 (MSP): ಮೇಕ್ ಇನ್ ಇಂಡಿಯಾದ ನಿರ್ಮಾಣಕ್ಕಾಗಿ ದೇಶಿ ನಿರ್ಮಿತ ಉತ್ಪನ್ನಗಳನ್ನು ಬಳಸಿ, ಡಿಜಿಟಲ್ ಮಾಧ್ಯಮದ ಮೂಲಕ ವಹಿವಾಟು ನಡೆಸಿ ಎಂದು ಆಗಾಗ್ಗೆ ತಮ್ಮ ಮಾತುಗಳಲ್ಲಿ ಹೇಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಕೇವಲ ಅದನ್ನು ಮಾತಿನಲ್ಲಿ ಹೇಳದೇ ಕೃತಿಯಲ್ಲೂ ಮಾಡಿ ತೋರಿದ್ದಾರೆ.
ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ ಆ ಬಳಿಕ ಅಲ್ಲಿ ನಡೆಯುತ್ತಿದ್ದ ಶಾಪಿಂಗ್ ಫೆಸ್ಟಿವಲ್ ಗೂ ವಿಸಿಟ್ ಮಾಡಿದ್ದರು. ಈ ವೇಳೆ ಅಲ್ಲಿದ್ದ ಖಾದಿ ಹಾಗೂ ಗ್ರಾಮೋದ್ಯೋಗ ಕೈಗಾರಿಕಾ ಮಂಡಳಿಯ ಮಳಿಗೆಯಲ್ಲಿ ಪ್ರಧಾನಿ ಜನಸಾಮಾನ್ಯರಂತೆ ಜಾಕೆಟ್ ವೊಂದನ್ನು ಕೇಳಿ ನಮಗಿಷ್ಟ ಜಾಕೆಟ್ ಖರೀದಿಸಿದರು. ಇದಕ್ಕಾಗಿ ಪಾವತಿ ಮಾಡುವಾಗಲೂ ರುಪೇ ಕಾರ್ಡ್ ನ್ನು ನೀಡಿ ವಹಿವಾಟನ್ನು ಪೂರ್ಣಗೊಳಿಸಿದ್ದಾರೆ.
ಪ್ರಧಾನಿ ಮೋದಿ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಪ್ರಧಾನಿ ಜಾಕೆಟ್ ಖರೀದಿಸಿ ರುಪೇ ಕಾರ್ಡ್ ನಲ್ಲಿ ಪಾವತಿ ಮಾಡಿರುವ ವಿಡಿಯೋ ವೈರಲ್ ಆಗಿದೆ.