ಬ್ಯಾಂಕಾಕ್, ಜೂ 29 (DaijiworldNews/HR): ಜನಪ್ರಿಯ ತುಳು ಹಾಸ್ಯ ಕಾರ್ಯಕ್ರಮ 'ಪ್ರೈವೆಟ್ ಚಾಲೆಂಜ್'ನ ಜೋಡಿ ಎಂದೇ ಖ್ಯಾತರಾಗಿರುವ ದೈಜಿವರ್ಲ್ಡ್ ವಾಹಿನಿಯ ಸಂಸ್ಥಾಪಕ ವಾಲ್ಟರ್ ನಂದಳಿಕೆ ಮತ್ತು 'ತುಳುನಾಡ ಮಾಣಿಕ್ಯ' ಅರವಿಂದ ಬೋಳಾರ್ ಅವರನ್ನು ತುಳುಕೂಟ ಬ್ಯಾಂಕಾಕ್ (ಥೈಲ್ಯಾಂಡ್) ತಮ್ಮ 'ಥಾಯ್-ತುಳುವೆರೆ ಆಯೆನೋ'ಗೆ ಗೌರವ ಅತಿಥಿಗಳಾಗಿ ಆಹ್ವಾನಿಸಿದೆ.
ಜುಲೈ 2 ರಂದು ಬ್ಯಾಂಕಾಕ್ನ ಸುಖುಮ್ವಿಟ್ ಎಸ್ಒಐ 33, ಲೋಟಸ್ ಹೋಟೆಲ್ನಲ್ಲಿ ಥಾಯ್-ತುಳುವೆರೆ ಆಯೆನೋ ಕಾರ್ಯಕ್ರಮ ನಡೆಯಲಿದೆ.
ದೈಜಿವರ್ಲ್ಡ್ ಜೊತೆ ಮಾತನಾಡಿದ ತುಳು ಕೂಟದ ಬ್ಯಾಂಕಾಕ್ ಅಧ್ಯಕ್ಷ ರೋಶನ್ ಪಿಂಟೋ, ಮಂಗಳೂರಿನ ಅತ್ಯಂತ ಜನಪ್ರಿಯ ತುಳು ಹಾಸ್ಯ ಕಾರ್ಯಕ್ರಮದ ಜೋಡಿಗಳನ್ನು ಸ್ವಾಗತಿಸುವುದು ಥೈಲ್ಯಾಂಡ್ನಲ್ಲಿ ವಾಸಿಸುವ ತುಳುವರಿಗೆ ದೊಡ್ಡ ಭಾಗ್ಯವಾಗಿದೆ. ಥಾಯ್ಲೆಂಡ್ನಲ್ಲಿರುವ ಪ್ರತಿಯೊಬ್ಬ ತುಳುವರು ಪ್ರೈವೆಟ್ ಚಾಲೆಂಜ್ ಕಾರ್ಯಕ್ರಮವನ್ನು ವೀಕ್ಷಿಸಿ ಸಂತೋಷ ಪಡುತ್ತಾರೆ ಎಂದರು.
ಥೈಲ್ಯಾಂಡ್ನಲ್ಲಿ ತುಳು ಮಾತನಾಡುವ ಕೆಲವು ಕುಟುಂಬಗಳು ಇದ್ದು, ಕೋವಿಡ್ನಿಂದಾಗಿ ಕಳೆದೆರಡು ವರ್ಷಗಳಿಂದ ನಮ್ಮ ವಾರ್ಷಿಕ ಕಾರ್ಯಕ್ರಮವನ್ನು ದೊಡ್ಡ ರೀತಿಯಲ್ಲಿ ಆಯೋಜಿಸಲು ನಮಗೆ ಸಾಧ್ಯವಾಗಲಿಲ್ಲ. ಇದೀಗ ಥೈಲ್ಯಾಂಡ್ ಮತ್ತು ಸುತ್ತಮುತ್ತಲಿನ ತುಳು ಮಾತನಾಡುವ ಜನರು ಒಟ್ಟುಗೂಡಿ ಸಮಯವನ್ನು ಕಳೆಯಲು ಉತ್ತಮ ಅವಕಾಶವಾಗಿದೆ ಎಂದಿದ್ದಾರೆ.
ಅರವಿಂದ ಬೋಳಾರ್ ಮಾತನಾಡಿ, ಬ್ಯಾಂಕಾಕ್ನಲ್ಲಿರುವ ತುಳುವರನ್ನು ಭೇಟಿ ಮಾಡುವ ಅವಕಾಶ ಲಭಿಸಿರುವುದು ಸಂತೋಷವಾಗಿದೆ. ಇದು ಥೈಲ್ಯಾಂಡ್ಗೆ ನನ್ನ ಮೊದಲ ಪ್ರಯಾಣವಾಗಿರುವುದರಿಂದ ಉತ್ಸುಕನಾಗಿದ್ದೇನೆ. ತುಳುಕೂಟ ಬ್ಯಾಂಕಾಕ್ನಿಂದ ನಮಗೆ ಆಹ್ವಾನ ಬಂಧಿರುವುದಕ್ಕೆ ತುಂಬಾ ಸಂತೋಷವಾಗಿದೆ ಎಂದರು.
ಈ ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ನವೀನ್ ರೋಶನ್ (+66906532629), ಶಾರಿಕ್ ಹುಸೇನ್ (+66819221176) ಮತ್ತು ವಿನಯ್ ರೈ (+66819477303)