ಉಡುಪಿ,ಅ 24: ಯುವಕರಿಗೆ ಶೇಕಡ 10ರಷ್ಟು ಉದ್ಯೋಗ ಸೃಷ್ಟಿ ಮಾಡದ ಕೇಂದ್ರ ಸರಕಾರ ವಿರುದ್ದ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಿದರು. ಉಡುಪಿಯ ಪ್ರಧಾನ ಅಂಚೆ ಕಚೇರಿಯ ಮುಂದೆ ಇಂದು ಪ್ರತಿಭಟನಕಾರರು ಧರಣಿ ನಡೆಸಿ ಕೇಂದ್ರ ಸರಕಾರ ವಿರುದ್ದ ದಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. ಪ್ರತಿಭಟನೆಯನ್ನುದ್ದೇಶಿಸಿ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಉಮೇಶ್ ಬೋರೆಗೌಡ ಅವರು ಮಾತನಾಡಿ ಅಧಿಕಾರಕ್ಕೆ ಬರುವ ಮೊದಲು ನರೇಂದ್ರ ಮೋದಿ ಜನಸಾಮಾನ್ಯರಿಗೆ ನೀಡಿರುವ ಆಶ್ವಾಸನೆಗಳನ್ನು ಒಂದು ಈಡೇರಿಸಿಲ್ಲ. ದೇಶದ ಯುವಕರಿಗೆ ಚುನಾವಣೆ ಸಂದರ್ಭ ಮೋದಿ ಅವರು ಪ್ರತಿವರ್ಷ ೨ ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಆಶ್ವಾಸನೆ ನೀಡಿದ್ದರು. ದೇಶದ ಯುವಕರು ಮೋದಿಯವರ ಮರಳು ಮಾತಿಗೆ ಬಿದ್ದು ಮತವನ್ನು ನೀಡಿದ್ರು.ಅದ್ರೆ ಮೋದಿಯವರು ಇವೆರಗೆ 10 ಶೇಕಾಡದಷ್ಟು ಕೂಡಾ ಉದ್ಯೋಗ ಸೃಷ್ಟಿ ಮಾಡಿಲ್ಲ . ಈ ವಿಚಾರವನ್ನು ಮೋದಿ ಹಾಗೂ ಅವರ ಆಪ್ತ ನಾಯಕರು ಮರೆತರೂ ದೇಶದ ಯುವ ಜನಾಂಗ ಮರೆತಿಲ್ಲ ಎಂದು ಮೋದಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ಕೇಂದ್ರದ ಬಿಜೆಪಿ ನಾಯಕರ ವಿಚಾರ ಈ ರೀತಿ ಆದ್ರೆ ಇನ್ನೂ ರಾಜ್ಯ ಬಿಜೆಪಿ ನಾಯಕರ ಅವವ್ಯಸ್ಥೆ ಕೂಡಾ ಇದಕ್ಕಿಂತ ಹೀನಾಯವಾಗಿದೆ. ಕರಾವಳಿ ಭಾಗದ ಬಿಜೆಪಿ ಸಂಸದರು ಹಾಗೂ ಜನಪ್ರತಿನಿದಿಗಳು ಕೇವಲ ಜಿಲ್ಲೆಯಲ್ಲಿ ಬೆಂಕಿ ಹಾಕುವ ಹೇಳಿಕೆ ನೀಡುತ್ತಾರೆ ಹೊರತು ಅವರಿಗೆ ಜಿಲ್ಲೆಯ ಅಭಿವೃದ್ದಿ ಬಗ್ಗೆ ಒಂಚೂರು ಆಸಕ್ತಿ ಇಲ್ಲ ಎಂದು ಟೀಕಿಸಿದರು. ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ- ವಿಶ್ವಾಸ್ ಅಮಿನ್,ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ-ಮೆಲ್ವಿನ್ ಡಿಸೋಜಾ, ಕಾಂಗ್ರೆಸ್ ಮುಖಂಡ - ಪ್ರಖ್ಯಾತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.