ಸುಳ್ಯ, ಜೂ 28 (DaijiworldNews/HR): ದಕ್ಷಿಣ ಕನ್ನಡ ಗಡಿ ಭಾಗವಾದ ಸುಳ್ಯ ತಾಲೂಕಿನ ಹಲವೆಡೆ ಭೂಕಂಪನದ ಕುರಿತಂತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬುಲೆಟಿನ್ ಈಗಾಗಲೇ ಬಿಡುಗಡೆಗೊಳಿಸಿದ್ದು, ಮತ್ತೆ ಸಂಜೆಯ ವೇಳೆಗೆ ಭೂಮಿ ಕಂಪಿಸಿದ ಘಟನೆ ವರದಿಯಾಗಿದೆ.
ಚೆಂಬು,ಗೂನಡ್ಕ, ತೊಡಿಕಾನ ಭಾಗದ ಶೆಟ್ಯಡ್ಕ, ಕಲ್ಲುಗದ್ದೆ ಮುಂತಾದ ಕಡೆ ಸುಮಾರು 4.45 ರ ಹೊತ್ತಿಗೆ ಮತ್ತೆ ಭೂಮಿ ಕಂಪಿಸಿದ ಬಗ್ಗೆ ಆ ಭಾಗದ ಜನರು ಹೇಳಿಕೊಂಡಿದ್ದಾರೆ.
ಇನ್ನು ಬೆಳಿಗ್ಗೆ 7 ಗಂಟೆ 45 ನಿಮಿಷ 47 ಸೆಕೆಂಡಿಗೆ ಈ ಭೂಕಂಪನ ಸಂಭವಿಸಿದ್ದು, ಮಡಿಕೇರಿ ದಕ್ಷಿಣ ಕನ್ನಡ ಗಡಿ ಗ್ರಾಮವಾಗಿರುವ ಚೆಂಬುವಿನಿಂದ 5.2 ವಾಯುವ್ಯ ದಿಕ್ಕಿನಲ್ಲಿ ಭೂಮಿಯ 15 ಕಿಲೋಮೀಟರ್ ಆಳದಲ್ಲಿ ರಿಕ್ಟರ್ ಮಾಪಕ 3.0 ರಷ್ಟು ಭೂಕಂಪನವಾಗಿದ್ದು, ಸಂಜೆ ಆದರ ತೀವ್ರತೆ ಬೆಳಿಗ್ಗಿನಷ್ಟು ಇರಲಿಲ್ಲ ಎಂದಿದ್ದಾರೆ.