ಮಂಗಳೂರು, ಜೂ 28 (DaijiworldNews/MS): ನಗರದ ಪಂಪ್ ವೆಲ್ ಮೇಲೇತ್ಸುವೆ ಸನಿಹ ರಸ್ತೆ ಮದ್ಯೆ ಬಿರುಕು ಕಾಣಿಸಿಕೊಂಡಿದೆ. ರಸ್ತೆ ಉಬ್ಬಿ ಬಂದಂತಾಗಿ ಬಿರುಕು ಬಿಟ್ಟಿದ್ದು ಒಳಗಡೆಯಿಂದ ಭಾರೀ ಪ್ರಮಾಣದಲ್ಲಿ ನೀರು ಹೊರಚಿಮ್ಮುತ್ತಿದೆ.
ತುಂಬೆಯಿಂದ ಕರಾವಳಿ ಬೆಂದೂರ್ ಲೈನ್ ಗೆ ಹೋಗುವ ಕುಡಿಯುವ ನೀರಿನ ಪೈಪ್ ಲೈನ್ ಕುಸಿತವಾದ ಹಿನ್ನಲೆಯಲ್ಲಿ ಡಾಂಬರು ರಸ್ತೆ ಕುಸಿದು ರಸ್ತೆ ಬಿರುಕುಬಿಟ್ಟು ಸಂಚಾರ ಅಸ್ತವ್ಯಸ್ತವಾಗಿದೆ ಎನ್ನಲಾಗಿದೆ.
ಪಂಪ್ವೆಲ್ ರಸ್ತೆ ಮಧ್ಯೆ ಹಾದು ಹೋಗಿರುವ ಪೈಪ್ ಲೈನ್ ಕುಸಿದಿದು ಒಡೆದು ಹೋಗಿರುವ ಸಾಧ್ಯತೆ ಇದ್ದು, ಏಕಾಏಕಿ ರಸ್ತೆ ಬಿರುಕು ಬಿಟ್ಟ ಪರಿಣಾಮ ಸಂಚಾರ ಅಸ್ತವ್ಯಸ್ಥವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳಿಯರು ವಾಹನ ಸವಾರರನ್ನು ಎಚ್ಚರಿಸುತ್ತಿದ್ದಾರೆ.
ಇನ್ನು ಸ್ಥಳಕ್ಕೆ ಮೇಯರ್ ಪ್ರೇಮಾನಂದ ಶೆಟ್ಟಿ, ಮಾಜಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.