ಕಾಸರಗೋಡು, ಜೂ 28 (DaijiworldNews/MS): ಗಲ್ಫ್ ಉದ್ಯೋಗಿ ಸೀತಾಂಗೋಳಿ ಮುಗುವಿನ ಅಬೂಬಕ್ಕರ್ ಸಿದ್ದಿಕ್ ನನ್ನು ಅಪಹರಿಸಿ ಕೊಲೆಗೈದ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸ್ ಇಲಾಖೆಯೂ ಆರೋಪಿಗಳ ಪತ್ತೆ ವಿಶೇಷ ತಂಡ ರಚನೆ ಮಾಡಲಾಗಿದೆ.
ಕಾಸರಗೋಡು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ 14 ಮಂದಿಯ ವಿಶೇಷ ತಂಡ ರಚನೆ ಮಾಡಲಾಗಿದ್ದು, ದುಷ್ಕರ್ಮಿಗಳು ಕರ್ನಾಟಕಕ್ಕೆ ಪರಾರಿಯಾಗಿರುವ ಶಂಕೆ ಹಿನ್ನಲೆಯಲ್ಲಿ ಒಂದು ತಂಡ ಕರ್ನಾಟಕ, ಇನ್ನೊಂದು ತಂಡ ಕೇರಳದ ವಿವಿಧೆಡೆ ತೆರಳಿ ತನಿಖೆ ನಡೆಸುತ್ತಿದೆ.
ಈಗಾಗಲೇ ಕಸ್ಟಡಿಯಲ್ಲಿದ್ದ ಮೂವರ ಪೈಕಿ ಓರ್ವನನ್ನು ವಿಚಾರಣೆ ನಡೆಸಿ ಬಿಡುಗಡೆ ಮಾಡಲಾಗಿದ್ದು, ಇಬ್ಬರೂ ಶಂಕಿತ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿಯಲ್ಲಿದ್ದಾರೆ . ಪೈವಳಿಕೆ ಹಾಗೂ ಮಂಜೇಶ್ವರದ ಕೊಟೇಶನ್ ತಂಡ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಅದರಲ್ಲೂ ಪೈವಳಿಕೆಯ ಝಿಯಾ ಶಾಮೀಲು ಇರುವ ಬಗ್ಗೆ ಸಂಶಯವಿದ್ದು ಈ ಹಿಂದೆಯೂ ನಡೆದ ಹಲವು ಪ್ರಕರಣಗಳಲ್ಲೂ ಈತ ಶಾಮೀಲಾಗಿದ್ದ. ಹಣಕಾಸಿನ ವ್ಯವಹಾರ ಕುರಿತ ದ್ವೇಷ ಕೃತ್ಯಕ್ಕೆ ಕಾರಣ ಪೊಲೀಸರ ಪ್ರಾಥಮಿಕ ತಿಳಿದುಬಂದಿದೆ.