ಬಂಟ್ವಾಳ, ಜೂ 27 (DaijiworldNews/DB): ಸ್ಕೂಟರ್ಗಳ ನಡುವೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರನೋರ್ವ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಜೂನ್ 26ರಂದು ನಡೆದಿದೆ.
ಪುಂಜಾಲಕಟ್ಟೆ ಸಮೀಪದ ಗಂಪದಡ್ಡ ಎಂಬಲ್ಲಿಯ ಹಂಝ ಅವರ ಪುತ್ರ ನವಾಝ್(24) ಮೃತಪಟ್ಟವರು. ಜೂ. 24ರಂದು ರಾತ್ರಿ 10.45ರ ವೇಳೆಗೆ ರಾಷ್ಟ್ರೀಯ ಹೆದ್ದಾರಿ ಮಡಂತ್ಯಾರುವಿನಲ್ಲಿ ಬೆಳ್ತಂಗಡಿ ತಾಲೂಕಿನ ನ್ಯಾಯತರ್ಪು ಗ್ರಾಮದ ಕೆಳಗಿನಬೆಟ್ಟು ಮನೆ ನಿವಾಸಿ ರಾಜೇಶ್ ಎಂಬವರು ಸ್ಕೂಟರ್ನಲ್ಲಿ ತನ್ನ ತಂದೆಯೊಡನೆ ಬೆಳ್ತಂಗಡಿ ಕಡೆಗೆ ಸಾಗುತ್ತಿದ್ದಾಗ ಎದುರುಗಡೆಯಿಂದ ಬರುತ್ತಿದ್ದ ನವಾಝ್ನ ಸ್ಕೂಟರ್ ಢಿಕ್ಕಿಯಾಗಿತ್ತು. ಅಪಘಾತದಲ್ಲಿ ರಾಜೇಶ್ ಹಾಗೂ ಅವರ ತಂದೆ ಗಾಯಗೊಂಡು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಗಂಭೀರ ಗಾಯಗೊಂಡ ನವಾಝ್ನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನವಾಝ್ ಮೃತಪಟ್ಟಿದ್ದಾರೆ.
ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಹಂಝ ಅವರ ನಾಲ್ವರು ಮಕ್ಕಳಲ್ಲಿ ನವಾಝ್ ಮೂರನೆಯವರಾಗಿದ್ದು, ಕೂಲಿ ಕಾರ್ಮಿಕರಾಗಿದ್ದರು.