ಮಂಗಳೂರು, ಜ 17(SM): ದ.ಕ. ಜಿಲ್ಲಾ ಜನತೆಯ ಸಂಪರ್ಕಕ್ಕೆ ಸಿಗದೆ ಜಿಲ್ಲೆಯ ಬಿಜೆಪಿ ಶಾಸಕರು ‘ಕಾಣೆಯಾಗಿದ್ದಾರೆ, ಪರಾರಿಯಾಗಿದ್ದಾರೆ, ತಪ್ಪಿಸಿಕೊಂಡಿದ್ದಾರೆ, ಓಡಿ ಹೋಗಿದ್ದಾರೆ, ನಾಪತ್ತೆಯಾಗಿದ್ದಾರೆ, ಕಣ್ಮರೆಯಾಗಿದ್ದಾರೆ ಹುಡುಕಿಕೊಡಿ’ ಎಂಬ ಪೋಸ್ಟರ್ ಗಳು ಗುರುವಾರದಂದು ಮಂಗಳೂರಿನಲ್ಲಿ ಕಂಡು ಬಂದವು.
ದೂರದ ಪಂಚತಾರಾ ರೆಸಾರ್ಟ್ನಲ್ಲಿ ವಸತಿ ಹೂಡಿರುವ ಬಿಜೆಪಿ ಶಾಸಕರ ವಿರುದ್ಧ ಡಿವೈಎಫ್ಐ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ವಿನೂತನವಾಗಿ ಪ್ರತಿಭಟನೆ ನಡೆಸಿತು. ಈ ಸಂದರ್ಭದಲ್ಲಿ ‘ಜಿಲ್ಲೆಯ ಬಿಜೆಪಿ ಶಾಸಕರು ಕಾಣೆಯಾಗಿದ್ದಾರೆ, ಪರಾರಿಯಾಗಿದ್ದಾರೆ, ತಪ್ಪಿಸಿಕೊಂಡಿದ್ದಾರೆ, ಓಡಿ ಹೋಗಿದ್ದಾರೆ, ನಾಪತ್ತೆಯಾಗಿದ್ದಾರೆ, ಕಣ್ಮರೆಯಾಗಿದ್ದಾರೆ ಹುಡುಕಿಕೊಡಿ’ ಎನ್ನುವ ಹೆಸರಿನ ಪೋಸ್ಟರ್ಗಳನ್ನು ಪ್ರದರ್ಶಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಜನತೆಯ ಮತ ಸೇವೆ ಮಾಡುವುದಾಗಿ ಭರವಸೆ ನೀಡಿ ಅಧಿಕಾರ ಪಡೆದು ಎಳ್ಳುನೀರು ಬಿಟ್ಟಿದ್ದೀರಿ. ರೆಸಾರ್ಟ್ನಿಂದ ನಿಮ್ಮ ಕ್ಷೇತ್ರಗಳಿಗೆ ವಾಪಸಾಗಿ ಜನಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಶಾಸಕರು ಭಯ ಪಡುವುದು ಜನತೆಗೆ ವಿನಃ ಯಡಿಯೂರಪ್ಪನ ಕುತಂತ್ರದ ರಾಜಕಾರಣಕ್ಕೆ ಅಲ್ಲ.
ಜನತೆಯ ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ ಇನ್ನೆರಡು ದಿನಗಳಲ್ಲಿ ಎಲ್ಲ ಬಿಜೆಪಿ ಶಾಸಕರ ನಿವಾಸಗಳ ಮುಂದೆ ಡಿವೈಎಫ್ಐನಿಂದ ಪ್ರತಿಭಟನೆ ಮಾಡುವ ಮೂಲಕ ಹೋರಾಟಕ್ಕೆ ಇಳಿಯಲಿದ್ದೇವೆ’ ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ ಕೆ ಇಂಮ್ತಿಯಾಝ್ ಎಚ್ಚರಿಕೆ ನೀಡಿದ್ದಾರೆ.