ಮಂಗಳೂರು, ಜೂ 27 (DaijiworldNews/MS): ಟೆಂಡರ್ ವಹಿಸಿರುವ ಸಂಸ್ಥೆಯು ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಡಳಿತಕ್ಕೆ ಬೇಡಿಕೆ ಮುಂದಿರಿಸಿದೆ.
ಮಾರನಹಳ್ಳಿ- ಸಕಲೇಶಪುರ ರಸ್ತೆ ತಿರುವುಗಳನ್ನು ಹೊಂದಿದ್ದು, ರಸ್ತೆ ರಿಪೇರಿಗಾಗಿ ಸಂಚಾರ ಬಂದ್ ಮಾಡುವುದು ತೀರಾ ಅಗತ್ಯ ಎಂದು ಕಾಮಗಾರಿ ಟೆಂಡರ್ ವಹಿಸಿರುವ ಸಂಸ್ಥೆ ಪ್ರತಿಪಾದಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ, ’ಸದ್ಯಕ್ಕೆ ರಸ್ತೆ ಮುಚ್ಚುವ ಚಿಂತನೆ ಇಲ್ಲ. ಅಧಿಕಾರಿಗಳು, ತಂತ್ರಜ್ಞರ ಜತೆ ಜಂಟಿ ಸರ್ವೇ ನಡೆಸಿ ಯಾವ ರೀತಿಯಲ್ಲಿ ರಸ್ತೆಯನ್ನು ದುರಸ್ತಿ ಮಾಡಬಹುದು ಎಂಬ ಬಗ್ಗೆ ಶೀಘ್ರ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.