ಕಾರ್ಕಳ, ಜೂ 26 (DaijiworldNews/HR): ಶೌರ್ಯ ಸಂಚಲನ ಹಿಂದೂ ಸಮಾಜದಲ್ಲಿ ಆತ್ಮ ವಿಶ್ವಾಸ, ಜಾಗ್ರತಿ, ಸ್ವಾಭಿಮಾನ ವನ್ನು ತುಂಬಿಸುತದೇ, ಮತ್ತು ದೇಶ ವಿರೋಧಿಗಳಿಗೆ ಧರ್ಮ ವಿರೋಧಿಗಳಿಗೆ ದಿಟ್ಟ ಉತ್ತರ ಎಂದು ಬಜರಂಗದಳ ರಾಜ್ಯ ಸಂಚಾಲಕ ಸುನೀಲ್ ಕೆ. ಆರ್ . ಹೇಳಿದರು.
ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಕಳ ಪ್ರಖಂಡ ಇದರ ವತಿಯಿಂದ ಮಂಜುನಾಥ ಪೈ ಸಭಾಂಗಣದಲ್ಲಿ ಆಯೋಜಿಸಿದ ಶೌರ್ಯ ಸಂಚಲನ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಅನಂತಶಯನ ವೃತ್ತದಲ್ಲಿ ಸಂಘಟನೆಯ ಪ್ರಮುಖ ಇರ್ವತ್ತೂರು ಭಾಸ್ಕರ್ ಎಸ್. ಕೋಟ್ಯಾನ್ ಪುಷ್ಪಾರ್ಚನೆಗೈಯುವ ಮೂಲಕ ಪಥ ಸಂಚಾಲನಕ್ಕೆ ಚಾಲನೆ ನೀಡಿದರು.
ನೂರಾರು ಕಾರ್ಯಕರ್ತರು ಪಥಸಂಚಲನಲ್ಲಿ ಪಾಲ್ಗೊಂಡು ಶ್ರೀ ಮಾರಿಯಮ್ಮ ಕ್ಷೇತ್ರದ ಮುಖ್ಯ ರಸ್ತೆಯಾಗಿ ಮಂಜುನಾಥ ಪೈ ಸಭಾ ಭವನಕ್ಕೆ ಸಾಗಿ ಬಂದರು.
ವಿ. ಹಿಂ. ಪ ಜಿಲ್ಲಾ ಅಧ್ಯಕ್ಷ ವಿಷ್ಙುಮೂರ್ತಿ ಆಚಾರ್ಯ ಅಧ್ಯಕ್ಷತೆ ವಹಿಸಿದರು. ಪರಿಷತ್ತಿನ ದೇವಿ ಪ್ರಸಾದ್ ಶೆಟ್ಟಿ ಮಾರ್ಗದರ್ಶನ ನೀಡಿದರು, ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ತಾರಾನಾಥ್, ಶಿವ ಶೆಟ್ಟಿ, ಬಜರಂಗದಳ ದ ಜಿಲ್ಲಾ ಸಂಚಾಲಕರ ಸುರೇಂದ್ರ, ವಿ.ಹಿಂ.ಪ ದ ಜಿಲ್ಲಾ ಉಪಾಧ್ಯಕ್ಷರಾದ ಅಶೋಕ್ ಪಾಲಡ್ಕ ಕಾರ್ಕಳ ದ ಉಪಾಧ್ಯಕ್ಷರಾದ ಅಶೋಕ್ ಜೈನ್, ಜಗದೀಶ್ ಸಾಣೂರ್ ಉಪಸ್ಥಿತರಿದ್ದರು.
ಬಜರಂಗದಳದ ಪ್ರಖಂಡ ಸಂಚಾಲಕ ಚೇತನ್ ಪೆರಲ್ಕೆ ಸ್ವಾಗತಿಸಿದರು. ಸುಧೀರ್ ನಿಟ್ಟೆ ಧನ್ಯವಾದ ನೀಡಿದರು. ಶೈಲೇಶ್ ನಿರೂಪಿಸಿದರು.