ಮಂಗಳೂರು, ಜೂ 26 (DaijiworldNews/HR): ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ವಿವಿಧ ಪ್ರಕರಣಗಳಡಿ ವಶಪಡಿಸಿಕೊಳ್ಳಲಾಗಿದ್ದ 23,75,300 ರೂ. ಮೌಲ್ಯದ 53,128 ಕೆಜಿ ಗಾಂಜಾ ಮತ್ತು 30,00,000 ಮೌಲ್ಯದ 120ಗ್ರಾಂ ಹೆರಾಯಿನ್ ಅನ್ನು ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಕಳ್ಳ ಸಾಗಣೆ ವಿರೋಧಿ ದಿನದ ಅಂಗವಾಗಿ ನಾಶಪಡಿಸಲಾಯಿತು.
ಕಮಿಷನರೇಟ್ ವ್ಯಾಪ್ತಿಯ 15 ಠಾಣೆಗಳಲ್ಲಿ 580.860 ಕೆ.ಜಿ. ಗಾಂಜಾ (1,16,17,200 ರೂ ಮೌಲ್ಯ), 25 ಗ್ರಾಂ ಹೆರಾಯಿನ್ (1,37,500 ರೂ.) ಮತ್ತು 320 ಗ್ರಾಂ ಎಂಡಿಎಂ (11,20,000 ರೂ. ಮೌಲ್ಯ)ನ್ನು ಪೊಲೀಸರು ವಿವಿಧ ಪ್ರಕರಣಗಳಡಿ ವಶ ಪಡಿಸಿಕೊಂಡಿದ್ದರು.
ಇನ್ನು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಉಪಸ್ಥಿತಿಯಲ್ಲಿ ಮೂಲ್ಕಿಯ ರಾಮ್ಕಿ ಎನರ್ಜಿ ಮತ್ತು ಎನ್ವಿರಾನ್ಮೆಂಟ್ ಲಿ. ಸಂಸ್ಥೆಯಲ್ಲಿ ನಾಶ ಪಡಿಸುವ ಪ್ರಕ್ರಿಯೆ ನಡೆಯಿತು.
ಈ ಸಂಧರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಸೋನವಾನೆ ಖುಷಿಕೇಶ್ ಭಗವಾನ್ ಹಾಗೂ ಇತರ ಉನ್ನತ ಪೊಲೀಸ್ ಅಧಿಕಾರಿಗಳು, ವಿವಿಧ ಠಾಣಾಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.