ವಿಟ್ಲ, ಜೂ 26 (DaijiworldNews/DB): ಅಕ್ರಮ ಗೋ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸರು ಕಾರ್ಯಾಚರಣೆ ನಡೆಸಿ ಓರ್ವನನ್ನು ಮಾಣಿಯಲ್ಲಿ ಬಂಧಿಸಿದ್ದಾರೆ. ಬಂಧಿತನಿಂದ ಪಿಕಪ್ ವಾಹನ ಹಾಗೂ ಜಾನುವಾರಗಳನ್ನು ವಶಪಡಿಸಿಕೊಂಡಿದ್ದಾರೆ.
ಇರಾಮೂಲೆ ನಿವಾಸಿ ಮಹಮ್ಮದ್ ಬಂಧಿತ ಆರೋಪಿ. ಕೃತ್ಯದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಹಮೀದ್ ಮತ್ತು ಪವನ್ ರಾಜ್ ವಿರುದ್ದ ಪ್ರಕರಣ ದಾಖಲಾಗಿದ್ದು, ಇವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಜಾನುವಾರುಗಳನ್ನು ವಧೆ ಮಾಡಿ ಕೇರಳಕ್ಕೆ ಮಾಂಸ ಸಾಗಾಟದ ಉದ್ದೇಶದಿಂದ ಆರೋಪಿಗಳು ಜಾನುವಾರಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದರು ಎಂಬುದಾಗಿ ತನಿಖೆ ವೇಳೆ ಗೊತ್ತಾಗಿದೆ. ಕೇರಳದಲ್ಲಿ ಹೆಚ್ಚಿನ ಬೆಲೆಗೆ ಈ ಮಾಂಸವನ್ನು ಮಾರಾಟ ಮಾಡಲು ಇರಾ ಗ್ರಾಮದ ಪವನ್ ರಾಜ್ ಮನೆಗೆ ಕೊಂಡೊಯ್ಯುವಂತೆ ಹಮೀದ್ ಮಹಮ್ಮದ್ನನ್ನು ಕಳುಹಿಸಿದ್ದ ಎನ್ನಲಾಗಿದೆ.