ಕಾರ್ಕಳ, ಜೂ 25 (DaijiworldNews/HR): ಅಜೆಕಾರು ಸಮೀಪದ ಶಿರ್ಲಾಲು ಹಾಡಿಯಂಗಡಿಯ ಮನೆಯೊಂದರಲ್ಲಿ ಲಕ್ಷಾಂತರ ಬೆಲೆಬಾಳುವ ಚಿನ್ನಾಭರಣ ಕಳವು ಆಗಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಶಿರ್ಲಾಲು ಹಾಡಿಯಂಗಡಿಯ ಚೆನ್ನಪ್ಪ (45) ಎಂಬವರು ಪ್ರಕರಣದ ದೂರುದಾರರು.
ಜೂನ್ 24ರ ಸಂಜೆ ಇವರು ಮನೆಗೆ ಬೀಗ ಹಾಕಿ ಪತ್ನಿಯೊಂದಿಗೆ ಆವರ ತವರು ಮನೆಯಾಗಿರುವ ಮಾಳಕ್ಕೆ ಹೋಗಿದ್ದರು. ಜೂನ್ 25ರ ಬೆಳಿಗ್ಗೆ 7 ಗಂಟೆಗೆ ಮನೆಗೆ ಹಿಂತಿರುಗಿದಾಗ ಮನೆಯ ಬಾಗಿಲು ತೆರೆದಿತ್ತು. ಮನೆ ಎದುರಿನ ಬಾಗಿಲಿನ ಚಿಲಕದ ಕೊಂಡಿಯನ್ನು ತುಂಡು ಮಾಡಿ ಮನೆಯ ಒಳಗೆ ಪ್ರವೇಶಿಸಿದ ಕಳ್ಳರು, ಕೋಣೆಯಲ್ಲಿದ್ದ ಕವಾಟಿನ ಬಾಗಿಲು ಮುರಿದು ವಸ್ತುಗಳನ್ನು ಜಾಲಾಡಿ, ಪಕ್ಕದಲ್ಲಿದ್ದ ಇನ್ನೊಂದು ಕಪಾಟಿನ ಬಾಗಿಲನ್ನು ಪಕ್ಕದಲ್ಲಿದ್ದ ಬೀಗದ ಕೀಯಿಂದ ತೆರೆದು ಒಳಗೆ ಲಾಕರ್ನಿಂದ ಸುಮಾರು 6 ಪವನ್ ತೂಕದ ಕರಿಮಣಿ ಸರ 1, 5 ಪವನ್ ತೂಕದ ಹವಳದ ಚೈನ್ - 1, ಸುಮಾರು 2 ಪವನ್ ತೂಕದ 2 ಜೊತೆ ಉಂಗುರ, 4 ಪವನ್ ತೂಕದ ಬ್ರಾಸ್ ಲೆಟ್ - 1, 4 ಪವನ್ ತೂಕದ ಚೈನ್ -1, 1 ಪವನ್ ತೂಕದ ಲೇಡಿಸ್ ಉಂಗುರ - 1 ಜೊತೆ, 2 ಪವನ್ ತೂಕದ ಕಿವಿಯೋಲೆ 2 ಜೊತೆ ಹಾಗೂ ಪಕ್ಕದ ಸೂಟ್ ಕೇಸಿನ ಒಳಗೆ ಪ್ಲಾಸ್ಟಿಕ್ ಡಬ್ಬದಲ್ಲಿ ಇಟ್ಟಿದ್ದ 1 ಪವನ್ ತೂಕದ ಜಂಟ್ಸ್ ಉಂಗುರ -1 ಜೊತೆಯನ್ನು ಕಳವು ಮಾಡಿರುತ್ತಾರೆ.
ಕಳವಾಗಿರುವ ಸುಮಾರು 200 ಗ್ರಾಂ ಚಿನ್ನದ ಮೌಲ್ಯ ರೂ. 8,00,000 ಹಾಗೂ ನಗದು ರೂ. 75,000 ಹಣ ಸೇರಿ ಒಟ್ಟು ಮೌಲ್ಯ ರೂ. 8,75,000 ಕಳ್ಳತನವಾಗಿರುತ್ತದೆ.
ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಕೇಸುದಾಖಲಾಗಿದೆ.