ಉಡುಪಿ, ಜೂ 25 (DaijiworldNews/HR): ಇಂದಿರಾಗಾಂಧಿ ಸರಕಾರ ಹೇರಿದ್ದ ತುರ್ತು ಪರಿಸ್ಥಿತಿಯ 45 ನೇ ವರ್ಷ ಸಂಪೂರ್ಣವಾದ ಹಿನ್ನೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಕರಾಳ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಉಡುಪಿ ಬಿಜೆಪಿ ಜಿಲ್ಲಾ ಧ್ಯಕ್ಷ್ಯರಾದ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ ಸಿದ್ದರಾಮಯ್ಯನವರು ಈಗ ದೇಶದಲ್ಲಿ ತುರ್ತುಪರಿಸ್ಥಿತಿ ವಾತಾವರಣ ಇದೆ ಎಂದಿದ್ದಾರೆ ಆದರೆ ಸಿದ್ದರಾಮಯ್ಯ ನವರು ಇದನ್ನು ಹೇಳುವುದು ಸರಿಯಲ್ಲ. ಅವರು ತುರ್ತು ಪರಿಸ್ಥಿತಿ ಸಂಧರ್ಭದಲ್ಲಿ ವಿರೋಧ ಪಕ್ಷದಲ್ಲಿ ಇದ್ದವರು. ಇವತ್ತು ಕಾಂಗ್ರೆಸ್ ಬಾಲ ಹಿಡಿದುಕೊಂಡು ಹೋಗುತ್ತಾ ಇದ್ದಾರೆ. ಕೇವಲ ತನ್ನ ರಾಜಕೀಯ ಅಧಿಕಾರವನ್ನು ಉಳಿಸಿಕೊಳ್ಳಲು ಇಂದಿರಾಗಾಂಧಿ ಯವರು ತುರ್ತು ಪರಿಸ್ಥಿತಿ ಯನ್ನು ಘೊಷಣೆ ಮಾಡಿದ್ದರು. ಇವತ್ತು ಕಾಂಗ್ರೆಸ್ ನವರಿಗೆ ಇಡಿ ನೋಟಿಸ್ ನೀಡಿದ ಕೂಡಲೇ ಧರಣಿ ಮಾಡುವ ಪರಿಸ್ಥಿತಿ ಬಂದಿದೆ. ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆಯಾಯಿತು. ಇದರಿಂದಾಗಿ ದೇಶದ ವಿರೋಧ ಪಕ್ಷದ ನಾಯಕರ ಬಂದನ ಕೂಡಾ ಆಯಿತು ಎಂದರು.
ಇದೇ ಸಂಧರ್ಭದಲ್ಲಿ ತುರ್ತು ಪರಿಸ್ಥಿತಿಯ ವಿರುದ್ದ ಹೋರಾಡಿದ್ದ ಕಾರ್ಕಳದ ರಮಾಕಾಂತ ದೇವಾಡಿಗ ಅವರನ್ನು ಜಿಲ್ಲಾ ಬಿಜೆಪಿ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಮನೋಹರ್ ಕಲ್ಮಾಡಿ, ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಕಾರ್ಯಕ್ರಮ ಸಂಯೋಜಕಿ ರೇಶ್ಮಾ ಯು ಶೆಟ್ಟಿ ಉಪಸ್ಥಿತರಿದ್ದರು.