ಉಡುಪಿ, ಜೂ 25 (DaijiworldNews/HR): ಕೆಲಸ ಸಿಗದ ಕಾರಣ ಸ್ವಲ್ಪ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಯುವಕ ನಾಪತ್ತೆಯಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಅಜ್ಜರಕಾಡಿನ ಜಿಲ್ಲಾಸ್ಪತ್ರೆಯಲ್ಲಿ ಫಾರ್ಮಾಸಿಸ್ಟ್ ಆಗಿ ಕೆಲಸ ಮಾಡುತ್ತಿರುವ ಉಮೇಶ ನಾರಾಯಣ ಭಿರ್ತಿ ಅವರ ಪುತ್ರ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿ ಕೆಲಸದ ಹುಡುಕಾಟದಲ್ಲಿದ್ದ ಆಯುಷ್ ನಾಪತ್ತೆಯಾಗಿದ್ದಾನೆ.
ಇನ್ನು ಉಮೇಶ ನಾರಾಯಣ ಭಿರ್ತಿ ಅವರು ಮಗ ಆಯುಷ್ ನನ್ನು ತನ್ನೊಂದಿಗೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಈ ವೇಳೆ ತಾನು ಹೊರಗಡೆ ತಿರುಗಾಡಿ ಬರುವುದಾಗಿ ಹೇಳಿ ಹೋದವನು ಈವರೆಗೂ ಆಸ್ಪತ್ರೆಗೂ ವಾಪಾಸು ಬಾರದೇ, ಮನೆಗೂ ಬಾರದೇ ಮೊಬೈಲ್ ಸಂಪರ್ಕಕ್ಕೂ ಸಿಗದೇ ಕಾಣೆಯಾಗಿದ್ದಾನೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.