ಮಂಗಳೂರು, ಜೂ 24 (DaijiworldNews/MS): ಮಾವಿನಕಾಯಿ ಕೊಯ್ಯಲೆಂದು ಮರ ಏರಿದ ಯುವಕನೋರ್ವ ವಿದ್ಯುತ್ ಶಾಕ್ ತಗಲಿ ಸಾವನ್ನಪ್ಪಿರುವ ದಾರುಣ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಜಲಾಲ್ ಬಾಗ್ ನಲ್ಲಿ ಶುಕ್ರವಾರ ಸಂಜೆ ವೇಳೆ ಸಂಭವಿಸಿದೆ.
ಮಹಮ್ಮದ್ ಇಲಿಯಾಸ್ (21) ಮೃತ ಯುವಕನಾಗಿದ್ದಾನೆ . ಸಂಜೆ ವೇಳೆ ಮನೆ ಸಮೀಪದ ಕಾಂಪೌಂಡಿನಲ್ಲಿರುವ ಮಾವಿನಮರಕ್ಕೆ ಕಾಯಿ ಕೀಳಲೆಂದು ತೆರಳಿದ ಸಂದರ್ಭ ಘಟನೆ ನಡೆದಿದೆ.
ಮಾವಿನ ಕಾಯಿ ಕೀಳಲು ಬಳಸುತ್ತಿದ್ದ ಕೋಲಿನ ಕಬ್ಬಿಣದ ಕೊಕ್ಕೆಗೆ ಮರದ ಕೊಂಬೆಗಳ ಮೂಲಕ ಹಾದು ಹೋಗಿದ್ದ ವಿದ್ಯುತ್ ತಂತಿಗೆ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.