ಮಂಗಳೂರು, ಜೂ 24 (DaijiworldNews/MS): ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಸಂಪೂರ್ಣವಾಗಿ ಸುಟ್ಟುಹೋದ ಘಟನೆ ನಗರ ಹೊರವಲಯದ ಪಡೀಲ್ ಅಳಪೆ ಸಮೀಪದ ನಾಗುರಿ ಬಳಿ ಜೂ.23 ರ ಶುಕ್ರವಾರ ನಡೆದಿದೆ.
ಅಗ್ನಿ ಅವಘಡದಿಂದ ಹಲವು ಸ್ಕೂಟರ್ಗಳು ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಇಂದು ಬೆಳಗ್ಗೆ ಸುಮಾರು 8 ಗಂಟೆಗೆ ಶೋರೂಮ್ನಲ್ಲಿ ಹೊಗೆ ಕಾಣಿಸಿದೆ. ಶೋರೂಮ್ನ ಮೇಲೇ ಇದ್ದ ಮನೆಯವರು ಹೊಗೆಯಾಡುತ್ತಿರುವುದನ್ನು ಕಂಡ ಮನೆ ಮಂದಿ ಕೆಳಗಿಳಿದು ಬಂದಾಗ ಪರಿಶೀಲಿಸಿದಾಗ ಅಗ್ನಿ ಅವಘಡ ಗಮನಕ್ಕೆ ಬಂದಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗ ಬೆಂಕಿ ನಂದಿಸುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.