ಕಾರ್ಕಳ, ಜೂ 23 (DaijiworldNews/MS): ರಾಜ್ಯ ಸರಕಾರದ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯಿಂದ ಪಠ್ಯ ಪುಸ್ತಕಗಳ ಕೇಸರೀ ಕರಣ, ಕೇಂದ್ರ ಸರಕಾರದಿಂದ ಗಾಂಧೀ ಕುಟುಂಬದ ಮೇಲೆ ಇಡಿ ಕಿರುಕುಳ, ಸೇನಾ ನೇಮಕಾತಿಯಲ್ಲಿ ಅವೈಜ್ಞಾನಿಕ ರೀತಿಯ ಅಗ್ನಿ ಪಥ ಯೋಜನೆ ಜಾರಿಯನ್ನು ವಿರೋದಿಸಿ ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಕಾರ್ಕಳ ಬಸ್ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನಾಗಾರರನ್ನು ಉದ್ದೇಶಿಸಿ ಮಾತಾಡಿದ ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರಪಾಲ್ ನಕ್ರೆ, ರೋಹಿತ್ ಚಕ್ರತೀರ್ಥ ಸಮಿತಿ ಪಠ್ಯ ಪರಿಷ್ಕರಣೆಯಲ್ಲಿ ಈ ದೇಶದ ಬಹುತ್ವದ ಕೊಲೆ ಮಾಡಲು ಹೊರಟಿದೆ. ಶಿಕ್ಷಣ ಕ್ಷೇತ್ರವನ್ನು ಪುರೋಹಿತಶಾಹಿ ಕಪಿ ಮುಷ್ಠಿಯಡಿಗೆ ತಂದು ಕೇಸರಿಕರಣ ಗೊಳಿಸುವ ವ್ಯವಸ್ಥಿತ ಪಿತೂರಿ ನಡೆಸಿದೆ. ಕೂಡಲೇ ಚಕ್ರತೀರ್ಥ ಸಮಿತಿಯನ್ನು ವಜಾಗೊಳಿಸಿ ಬರಗೂರು ರಾಮಚಂದ್ರ ಸಮಿತಿಯನ್ನು ಮರು ನೇಮಿಸ ಬೇಕು ಎಂದು ಒತ್ತಾಯಿಸಿದರು.
ನಿಕಟಪೂರ್ವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಿರಿಯ ನ್ಯಾಯವಾದಿ ಶೇಖರಮಡಿವಾಳ ಮಾತಾನಾಡಿ ಕೇಂದ್ರ ಸರಕಾರ ಸೇನಾ ನೇಮಕಾತಿಯಲ್ಲಿ ಅವೈಜ್ಞಾನಿಕ ರೀತಿಯ ಅಗ್ನಿಪಥ ಯೋಜನೆ ಜಾರಿಯ ಮೂಲಕ, ಸೇನೆಗೆ ಸೇರಿ ತಾವು ಪೂರ್ಣಪ್ರಮಾಣದಲ್ಲಿ ದೇಶಸೇವೆಯನ್ನು ಮಾಡಬೇಕೆಂಬ ಯುವ ಜನಾಂಗದ ಮಹದಾಶೆಗೆ ಕೊಳ್ಳಿ ಇಟ್ಟಿದೆ. ಇದು ಈ ದೇಶದ ಸೇನಾ ಗೌರವಕ್ಕೆ ಮಾಡಿದ ಮಹಾಪಮಾನ. ಈ ಯೋಜನೆಯನ್ನು ಕೂಡಲೇ ರದ್ದುಮಾಡಿ ಪೂರ್ಣಪ್ರಮಾಣದ ನೇಮಕಾತಿ ನಡೆಸ ಬೇಕು ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸಿದರು.
ಹಿರಿಯನಾಯಕ ಅಮೃತ್ ಶೆಣೈ ಮಾತಾಡಿ ಗಾಂಧೀ ಕುಟುಂಬದ ಬಗ್ಗೆ ಮಾತನಾಡಕುವ ಕನಿಷ್ಟ ಯೋಗ್ಯತೆಯೂ ಇಲ್ಲದ ಮೋದೀ ಸರಕಾರ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುತ್ತದೆ ಎಂಬ ಭಯದಿಂದ ರಾಹುಲ್ ಗಾಂದಿಯ ತೇಜೋವಧೆ ಮಾಡಲು ಇಡಿಯನ್ನು ಅಸ್ತ್ರವಾಗಿ ಬಳಸುತ್ತಿದೆ. ಇಂತಹ ಕುಟಿಲ ನೀತಿಯನ್ನು ಕಾಂಗ್ರೆಸ್ ಮೆಟ್ಟಿ ನಿಲ್ಲುವ ದಿನ ದೂರವಿಲ್ಲ ಎಂದರು.
ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದಾ ರಾವ್ ಪ್ರಸ್ತವನೆ ಗೈದು ಸ್ವಾಗತಿಸಿ ವಂದಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಧಾಕರ ಎನ್. ಕೋಟ್ಯಾನ್, ನಗರ ಕಾಂಗ್ರೆಸ್ ಅಧ್ಯಕ್ಷ ಮಧುರಾಜ್ ಶೆಟ್ಟಿ, ಬ್ಲಾಕ್ ಉಪಾಧ್ಯಕ್ ರವಿಶಂಕರ್ ಶೇರಿಗಾರ್, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರಾ, ಅಲ್ಪ ಸಂಖ್ಯಾತ ಘಟಕ ಅಧ್ಯಕ್ಷ ಮಹಮ್ಮದ್ ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ, ಅಸ್ಲಾಮ್ ಪುರಸಭಾ ಸದಸ್ಯರಾದ ಅಶ್ಪಕ್ ಅಹ್ಮದ್, ಪ್ರತಿಮಾ, ಹರೀಶ್ ಕುಮಾರ್ , ಮಾಜಿ ಪುರಸಭಾ ಅಧ್ಯಕ್ಷ ಸುಬಿತ್ ಕುಮಾರ್ ಮಾಜಿ ಸದಸ್ಯ , ನವೀನ್ ದೇವಾಡಿಗ, ಶಿವಾಜಿ ರಾವ್, ಐಟಿ ಜಿಲ್ಲಾ ಕಾರ್ಯದರ್ಶಿ ಸತೀಶ, ಮಾಜಿ ಜಿಪಂಸ ಸುಪ್ರೀತ್ ಶೆಟ್ಟಿ, ಪಂ.ಸ. ವಿಶ್ವನಾಥ ಭಂಡಾರಿ, ಅರಿಫ್ ಕಲ್ಲೋಟೆ, ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ಶೋಭ, ಆಶಾ ಶೆಟ್ಟಿ, ವಿನ್ನಿ ಡಿಸೋಜ, ಸುನಿಲ್ ಭಂಡಾರಿ, ಹೇಮಂತ, ನಿಶಾನ್ ಶೆಟ್ಟಿ, ಸುಂದರ್ ಚಂದ್ರರಾಜ್ ಅಬ್ದುಲ್ ಸಾಣೂರು, ಅತಿಕಾರಿ ಪ್ರಕಾಶ ಆಚಾರ್ಯ ಹಾಗೂ ಇನ್ನಿತರ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.