ಉಳ್ಳಾಲ, ಜೂ 21 (DaijiworldNews/DB): ತಾಂತ್ರಿಕ ಸಮಸ್ಯೆಯಿಂದಾಗಿ ಸಿರಿಯಾ ಮೂಲದ ಹಡಗೊಂದು ಉಚ್ಚಿಲ ಸೋಮೇಶ್ವರ ಬಳಿ ಸಮುದ್ರದಲ್ಲಿ ಅಪಾಯದಲ್ಲಿ ಸಿಲುಕಿದ ಘಟನೆ ಮಂಗಳವಾರ ನಡೆದಿದೆ.
ಹಡಗಿನಲ್ಲಿ ಸುಮಾರು 15 ಮಂದಿ ಸಿಬಂದಿಯಿದ್ದು, ಎಲ್ಲರನ್ನೂ ಕೋಸ್ಟ್ ಗಾರ್ಡ್ ತಂಡ ರಕ್ಷಿಸಿದ್ದಾರೆ. ಹಡಗು 8000 ಸಾವಿರ ಟನ್ ಉಕ್ಕಿನ ತಂತಿಗಳನ್ನು ಹೊತ್ತು ಓಮಾನ್ ನಿಂದ ಈಜಿಪ್ಟ್ ದೇಶಕ್ಕೆ ಸಾಗುತ್ತಿತ್ತು. ಈ ವೇಳೆ ಅರಬ್ಬೀ ಸಮುದ್ರದಲ್ಲಿ ಘಟನೆ ಸೆಂಭವಿಸಿದೆ. ಮಂಗಳೂರಿನಿಂದ 5.6 ನಾಟೆಕಲ್ ದೂರದಲ್ಲಿ ಹಡಗು ಸಂಚರಿಸುತ್ತಿದ್ದಾಗ ಅಡಿಭಾಗದಿಂದ ರಂಧ್ರ ಉಂಟಾಗಿ ನೀರು ಒಳಹೊಕ್ಕಿರುವುದರಿಂದ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಂಡಿದೆ ಎನ್ನಲಾಗಿದ್ದು, ಸಮಸ್ಯೆ ಕಾಣಿಸಿಕೊಂಡ ಕೂಡಲೇ ಕೋಸ್ಟ್ಗಾರ್ಡ್ಗೆ ಹಡಗಿನಲ್ಲಿದ್ದ ಸಿಬಂದಿ ಸಂದೇಶ ರವಾನಿಸಿದ ಕಾರಣ ರಕ್ಷಣೆ ಸಾಧ್ಯವಾಗಿದೆ.
ಹಡಗನ್ನು ದಡಕ್ಕೆ ಎಳೆದು ತರುವ ಪ್ರಯತ್ನ ನಡೆಸಲಾಗುತ್ತಿದೆ. ಆದರೆ ಮಳೆಯ ಕಾರಣ ಕಾರ್ಯಾಚರಣೆ ಸ್ವಲ್ಪ ವಿಳಂಬವಾಗುತ್ತಿದೆ ಎನ್ನಲಾಗಿದೆ.