ಕಾಸರಗೋಡು, ಜೂ 21 (DaijiworldNews/DB): ಬಡವ , ಶ್ರೀಮಂತರಲ್ಲದೆ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಶಿಕ್ಷಣ ಪಡೆಯಲು ಸರಕಾರಿ ಶಾಲೆಗಳು ಆದ್ಯತೆ ನೀಡಿವೆ ಎಂದು ರಾಜ್ಯ ಶಿಕ್ಷಣ ಸಚಿವ ವಿ . ಶಿವನ್ ಕುಟ್ಟಿ ಹೇಳಿದರು.
ಪಳ್ಳಿಕೆರೆ ಸರ್ಕಾರಿ ಹೈಯರ್ ಸೆಕಂಡರಿ ಶಾಲಾ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಅಭಿಯಾನದ ಅಂಗವಾಗಿ ನಿರ್ಮಿಸಿದ ಕಟ್ಟಡವನ್ನು ಆನ್ ಲೈನ್ ಮೂಲಕ ಅವರು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಸರಿತಾ, ಬ್ಲಾಕ್ ಪಂಚಾಯತ್ ಸದಸ್ಯೆ ಶಕೀಲಾ ಬಶೀರ್, ಪಳ್ಳಿಕೆರೆ ಗ್ರಾಮ ಪಂಚಾಯತ್ ಅಧ್ಯಕ್ಷ ಎಂ. ಕುಮಾರನ್, ವಾರ್ಡ್ ಸದಸ್ಯ ಸಿದ್ದಿಕ್ ಪಳ್ಳಿಪುಳ, ಬೇಕಲ ಎಇಒ ಕೆ. ಸುರೇಶ್, ವಿದ್ಯಾಕಿರಣಂ ಯೋಜನೆಯ ಜಿಲ್ಲಾ ಸಂಯೋಜಕ ದಿಲೀಪ್, ಪಿಡಬ್ಲ್ಯುಡಿ ಯಮುನಾ, ಪಳ್ಳಿಕ್ಕರ ಜಿಎಚ್ಎಸ್ಎಸ್ ಮುಖ್ಯ ಶಿಕ್ಷಕ ವಿಕೆಪಿ ಅಬ್ದುಲ್ ಜಬ್ಬಾರ್, ರಶೀದ್ ಕಳ್ಳಿಂಗಲ್, ಎಂ.ಬಿ. ಶಾನ್ ವಾಸ್, ಕುಂಞಮ್ಮ ದ್, ಎಂ.ಎ. ಲತೀಫ್, ರಾಜೇಂದ್ರ ಪ್ರಸಾದ್, ಪಳ್ಳಿಕ್ಕರ ಒಎಸ್ಎ ಅಧ್ಯಕ್ಷ ಸುಕುಮಾರನ್ ಪೂಚಕ್ಕಾಡ್, ಜಿಎಚ್ಎಸ್ಎಸ್ ಸಿಬ್ಬಂದಿ ಕಾರ್ಯದರ್ಶಿ ತುಫೈಲುರ್ ರೆಹಮಾನ್ ಮತ್ತು ಎಚ್ಎಸ್ ಸಿಬ್ಬಂದಿ ಕಾರ್ಯದರ್ಶಿ ಇಂದಿರಾ ಮಾರನ್ ಕಾವಿಲ್ ಉಪಸ್ಥಿತರಿದ್ದರು.
ತಾ.ಪಂ.ಅಧ್ಯಕ್ಷ ಪಿ.ಎಸ್.ಅಬ್ದುಲ್ ಸತ್ತಾರ್ ತೊಟ್ಟಿ ಸ್ವಾಗತಿಸಿ, ಪ್ರಭಾರ ಪ್ರಾಚಾರ್ಯ ಕೆ.ಸುಜಯ ವಂದಿಸಿದರು.