ಮಂಗಳೂರು, ಜೂ 21 (DaijiworldNews/DB): ಶ್ರೀನಿವಾಸ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಆಂಡ್ ಹುಮ್ಯಾನಿಟೀಸ್ ಪಾಂಡೇಶ್ವರ ಕ್ಯಾಂಪಸ್ ನ ಉನ್ನತ ಭಾರತ್ ಅಭಿಯಾನ ವೇದಿಕೆ, ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ರೂರಲ್ ರೀಕನ್ಸ್ಟ್ರಕ್ಷನ್ ಏಜೆನ್ಸಿ (ಸಿರಾ) ಮತ್ತು ಎನ್ಎಸ್ಎಸ್ ವತಿಯಿಂದ ಚೇಳ್ಯಾರು ದ.ಕ. ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಜೂನ್ 21ರ ಮಂಗಳವಾರ ನಡೆಯಿತು.
ಶಿಕ್ಷಣ ಇಲಾಖೆ ಮಂಗಳೂರಿನ ಬ್ಲಾಕ್ ಸಂಪನ್ಮೂಲ ವ್ಯಕ್ತಿ ನಾಗರಾಜ್ ಎಂ. ಮಾತನಾಡಿ, ಯೋಗವು ನಮ್ಮ ದೈನಂದಿನ ಜೀವನ ಮತ್ತು ನಮ್ಮ ಆರೋಗ್ಯದೊಂದಿಗೆ ಸಂಪರ್ಕ ಹೊಂದಿದೆ. ಯೋಗವನ್ನು ಕೇವಲ ಯೋಗ ದಿನಕ್ಕಾಗಿ ಮೀಸಲಿರಿಸದೆ ತಮ್ಮ ದೈನಂದಿನ ಜೀವನದಲ್ಲಿ ಮುಂದುವರಿಸಬೇಕು ಎಂದು ಸಲಹೆ ನೀಡಿದರು.
ಚೇಳ್ಯಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೆ. ನಿತ್ಯಾನಂದ ಮುಖ್ಯ ಅತಿಥಿಯಾಗಿದ್ದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಕೃಷ್ಣವೇಣಿ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ, ಯೋಗ ತರಬೇತುದಾರೆ ಮತ್ತು ಕೋಮಲಸ್ಪರ್ಶ್ ಸಲಹಾ ಕೇಂದ್ರದ ಪಿಆರ್ಒ ಸುನೀತಾ ನಾಯಕ್ ವಿದ್ಯಾರ್ಥಿಗಳಿಗೆ ಯೋಗ ತರಗತಿಗಳನ್ನು ನಡೆಸಿದರು.
ಶ್ರೀನಿವಾಸ ವಿಶ್ವವಿದ್ಯಾಲಯದ ಸಿರಾ ಕೋ-ಆರ್ಡಿನೇಟರ್ ಡಾ. ವಿದ್ಯಾ ಎನ್. ಕಾರ್ಯಕ್ರಮ ಸಂಯೋಜಕ, ಶ್ರೀನಿವಾಸ ವಿಶ್ವವಿದ್ಯಾಲಯದ ಐಎಸ್ಎಸ್ಎಚ್ ನ ಉಪನ್ಯಾಸಕ ಪ್ರೊ. ಜಾಯ್ಸನ್ ಪಿ. ಕಾರ್ಡೋಜಾ, ಶ್ರೀನಿವಾಸ ವಿಶ್ವವಿದ್ಯಾಲಯದ ಐಎಸ್ಎಸ್ಎಚ್ ಬಿಎ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕಿ ಪ್ರೊ. ಸುಶ್ಮಿತಾ ಮೊದಲಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಪ್ರಜ್ಞಾ ಸ್ವಾಗತಿಸಿ, ಶ್ರೇಯಸ್ ಶೆಣೈ ವಂದಿಸಿದರು. ರಾಜು ನಿರೂಪಿಸಿದರು.