ಮಂಗಳೂರು,ಜ 16(MSP): ಓಎಲ್ಎಕ್ಸ್ ಮೊಬೈಲ್ ಅಪ್ಲಿಕೇಷನ್ನಲ್ಲಿ ಬಂದ ‘ಬೈಕ್ ಮಾರಾಟಕ್ಕಿದೆ’ ಎಂಬ ಜಾಹೀರಾತು ನಂಬಿದ ನಗರದ ವ್ಯಕ್ತಿಯೊಬ್ಬರು 46,300 ಕಳೆದುಕೊಂಡಿದ್ದಾರೆ.
ನಗರದ ನಿವಾಸಿ ರಾಘವೇಂದ್ರ ಎಂಬುವವರು ವಂಚನೆಗೊಳಗಾದವರು. ಜನವರಿ 9ರಂದು ರಾತ್ರಿ ಓಎಲ್ಎಕ್ಸ್ ಅಪ್ಲಿಕೇಷನ್ನಲ್ಲಿ ಜಾಹೀರಾತುಗಳನ್ನು ನೋಡುತ್ತಿದ್ದರು. ಬೈಕ್ ಒಂದರ ಜಾಹೀರಾತು ನೋಡಿದ ಬಳಿಕ ಅಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದರು. ಆತ 50,000 ದರ ಹೇಳಿದ್ದ. ಚೌಕಾಸಿ ಮಾಡಿದಾಗ 40,000ಕ್ಕೆ ಮಾರಾಟ ಮಾಡಲು ಒಪ್ಪಿಕೊಂಡಿದ್ದ.
ಬಳಿಕ ಬೈಕ್ನ ಬೆಲೆ, ದಾಖಲೆ ಬದಲಾವಣೆ ಮತ್ತು ಕೊರಿಯರ್ ವೆಚ್ಚದ ಮೊತ್ತ ನೀಡುವಂತೆ ಕೇಳಿದ್ದಾನೆ. ಅದನ್ನು ನಂಬಿದ ರಾಘವೇಂದ್ರ ತಮ್ಮ ಬ್ಯಾಂಕ್ ಖಾತೆಯಿಂದ ಎಂಟು ಬಾರಿ ಒಟ್ಟು 46,300 ವರ್ಗಾವಣೆ ಮಾಡಿದ್ದರು. ನಂತರ ಬೈಕ್ ಕಳಿಸದೇ ಆತ ತಪ್ಪಿಸಿಕೊಂಡಿದ್ದಾನೆ. ಈ ಕುರಿತು ರಾಘವೇಂದ್ರ ಮಂಗಳೂರಿನ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.