ಮಂಗಳೂರು, ಜೂ 21 (DaijiworldNews/HR): ಮೇಕೆ ಸಾಕಾಣಿಕೆ ಮಾಡುವ ನೆಪದಲ್ಲಿ ವ್ಯಕ್ತಿಯೋರ್ವ ಇಬ್ಬರನ್ನು ವಂಚಿಸಿದ ಆರೋಪದ ಮೇಲೆ ಬಂದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆನ್ನಿಚನ್ ಜೋಸೆಫ್
ಫ್ರೆಡ್ರಿಕ್ ಫೆರಾವೊ ಮತ್ತು ವಿಜಯ್ ಬರ್ಬೋಜಾ ಅವರು ನೀಡಿದ ದೂರಿನ ಪ್ರಕಾರ, ಅವರು ಹಂಪನಕಟ್ಟೆಯಲ್ಲಿ ಜ್ಯೂಸ್ ಸ್ಟಾಲ್ ಹೊಂದಿದ್ದು, ಅವರ ಅಂಗಡಿಗೆ ಬೆನ್ನಿಚನ್ ಜೋಸೆಫ್ ಎಂಬಾತ ಮಸಾಲೆ ಪುಡಿ ಮತ್ತು ಉಪ್ಪಿನಕಾಯಿ ಸರಬರಾಜು ಮಾಡುತ್ತಿದ್ದರು.
ದಾವಣಗೆರೆಯಲ್ಲಿ ಮೇಕೆ ಸಾಕಾಣಿಕೆ ಹೊಂದಿದ್ದು, ಅದರಿಂದ ಉತ್ತಮ ಆದಾಯ ಗಳಿಸುತ್ತಿರುವುದಾಗಿ ಬೆನ್ನಿಚನ್ ತಿಳಿಸಿದ್ದು, ಫ್ರೆಡ್ರಿಕ್ ಮತ್ತು ವಿಜಯ್ ಅವರಿಗೆ ದಾವಣಗೆರೆಯಲ್ಲಿನ ತಮ್ಮ ಜಮೀನಿನಲ್ಲಿ ಮೇಕೆ ಸಾಕಣೆ ಕೇಂದ್ರ ಸ್ಥಾಪಿಸುವುದಾಗಿ ಭರವಸೆ ನೀಡಿದರು.
ಬೆನ್ನಿಚಾನ್ ಅವರ ಮಾತನ್ನು ನಂಬಿದ ಫ್ರೆಡ್ರಿಕ್ ಮತ್ತು ವಿಜಯ್ ಅವರ ಖಾತೆಗೆ ಮೂರು ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ. ಆದರೆ ಬೆನ್ನಿಚಾನ್ ಯಾವುದೇ ಫಾರ್ಮ್ ಮಾಡದೇ ವಂಚಿಸಿ ಪರಾರಿಯಾಗಿದ್ದಾನೆ.
ಈ ಬಗ್ಗೆ ಬಂದರ್ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.