ಸುರತ್ಕಲ್, ಜೂ 20 (DaijiworldNews/SM): "ಎನ್ ಐಟಿಕೆ ಟೋಲ್ ಗೇಟ್ ನಿಂದ ಹಣದ ಸೂಟ್ ಕೇಸ್ ಪಡೆದವರೇ ನನ್ನ ಬಗ್ಗೆ ವೈಯಕ್ತಿಕ ನಿರಾಧಾರ ಆರೋಪ ಮಾಡುತ್ತಿದ್ದಾರೆ" ಎಂದು ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಬಿಜೆಪಿ ನಾಯಕರ ಆರೋಪಕ್ಕೆ ಟಾಂಗ್ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಶಿಯಲ್ ಮೀಡಿಯಾ ಆರೋಪಕ್ಕೆ ಪ್ರತಿಭಾ ಕುಳಾಯಿ ತಿರುಗೇಟು ನೀಡಿದ್ದಾರೆ. "ಬಿಜೆಪಿ ಯುವಮೋರ್ಚಾ ಮಂಗಳೂರು ಉತ್ತರ" ಹೆಸರಲ್ಲಿ ಪೋಸ್ಟರ್ ಮಾಡಲಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ಎನ್ಐಟಿಕೆ ಟೋಲ್ಗೇಟ್ನಿಂದ ಸೂಟ್ಕೇಸ್ ಪಡೆದವರು ನನ್ನ ಬಗ್ಗೆ ವೈಯಕ್ತಿಕ ಆರೋಪ ಮಾಡುತ್ತಿದ್ದಾರೆ. ನಾನು ರಾಜಕೀಯಕ್ಕೆ ಬರುವ ಮೊದಲೇ ತೆರಿಗೆ ಕಟ್ಟುತ್ತಿದ್ದೆ. ನನ್ನ ಆಸ್ತಿ ವಿವರ ಬೇಕಿದ್ದರೆ ಪಾಲಿಕೆಯಲ್ಲಿ ತೆಗೆಯಲಿ. ನಾನು ಈ ಹಿಂದಿನಿಂದಲೂ ಟೋಲ್ಗೇಟ್ ಹೋರಾಟದಲ್ಲಿ ಗುರುತಿಸಿಕೊಂಡಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಹೇಳಿದ್ದಾರೆ.
ನನ್ನಲ್ಲಿ ಹಿಂದೆಯೂ ಮನೆ, ಕಾರು ಎಲ್ಲವೂ ಇತ್ತು. ನನ್ನ ತಂದೆ ಮಾಡಿರುವ ಅಸ್ತಿಯೂ ಇತ್ತು. ನಾನು ಹಿಂದೆಯೂ ತೆರಿಗೆ ಕಟ್ಟುತ್ತಾ ಬಂದಿದ್ದೇನೆ ಈಗಲೂ ತೆರಿಗೆ ಕಟ್ಟುತ್ತಿದ್ದೇನೆ. ನನ್ನ ಆಸ್ತಿ ಹೆಚ್ಚಾಗಿದ್ದರೆ ಅದು ನನ್ನ ವ್ಯವಹಾರದಿಂದಲೇ ಹೊರತು ಇಲ್ಲಿನ ಶಾಸಕರಂತೆ ಟೋಲ್ ಗೇಟ್ ಕೊಡುವ ಸೂಟ್ ಕೇಸ್ ನಿಂದಲ್ಲ. ಅಕ್ರಮ ಟೋಲ್ ಗೇಟ್ ನಿಂದ ಸೂಟ್ ಕೇಸ್ ಪಡೆಯುವ ಬದಲು ಭಿಕ್ಷೆ ಬೇಡುತ್ತಿದ್ದರೆ ಇವರಿಗೆ ಮತಕೊಟ್ಟು ಗೆಲ್ಲಿಸಿದ ಮತದಾರರು ನೆಮ್ಮದಿಯಿಂದ ಇರುತ್ತಿದ್ದರು" ಎಂದು ಪ್ರತಿಭಾ ಹೇಳಿದರು.