ಕಾಸರಗೋಡು, ಜೂ 20 (DaijiworldNews/SM): ಗಾಳ ಹಾಕಿ ಮೀನು ಹಿಡಿದು ಮರಳುತ್ತಿದ್ದಾಗ ಹೊಳೆಗೆ ಬಿದ್ದು ಓರ್ವ ಮೃತ ಪಟ್ಟ ಘಟನೆ ಕುಂಬಳೆ ಯಲ್ಲಿ ನಡೆದಿದೆ. ಕುಂಬಳೆ ರೈಲ್ವೆ ನಿಲ್ದಾಣ ಸಮೀಪದ ಮೊಯ್ದು(53) ಮೃತಪಟ್ಟವರು.
ಸೋಮವಾರ ಮೊಗ್ರಾಲ್ ಪುತ್ತೂರು ರೈಲ್ವೆ ಸೇತುವೆ ಸಮೀಪ ಘಟನೆ ನಡೆದಿದೆ.ಮೊಯ್ದು ಗೂಡಂಗಡಿ ವ್ಯಾಪಾರ ನಡೆಸುತ್ತಿದ್ದರು. ಗಾಳ ಹಾಕಿ ಮೀನು ಹಿಡಿದ ಬಳಿಕ ರೈಲ್ವೆ ಸೇತುವೆಗೆ ಹಗ್ಗ ಕಟ್ಟಿ ಮೇಲಕ್ಕೆ ಹತ್ತುತ್ತಿದ್ದಾಗ ಹಗ್ಗ ತುಂಡಾಗಿ ಹೊಳೆಗೆ ಬಿದ್ದಿದ್ದು, ಜೊತೆಯಲ್ಲಿದ್ದವರು ಪರಿಸರ ವಾಸಿಗಳಿಗೆ ಮಾಹಿತಿ ನೀಡಿದ್ದು, ಶೋಧ ನಡೆಸಿ ಮೃತದೇಹವನ್ನು ಮೇಲಕ್ಕೆತ್ತ ಲಾ ಯಿತು. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಮೊಯ್ದು ಕುಂಬಳೆ ರೈಲ್ವೇ ನಿಲ್ದಾಣ ಪರಿಸರದಲ್ಲಿ ಗೂಡಂಗಡಿ ನಡೆಸುತ್ತಿದ್ದರು