ಪುತ್ತೂರು, ಜೂ 20 (DaijiworldNews/SM): ಬಿಜೆಪಿ, ಸಂಘಟನೆಯಲ್ಲಿದ್ರೆ ಮಾತ್ರ ಹಿಂದೂನಾ? ಎಂದು ಶ್ರೀರಾಮ, ಸೀತಾದೇವಿ ಮತ್ತು ಅಂಜನೇಯನ ವಿರುದ್ಧ ಅಸಹ್ಯ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಐಟಿ ಸೆಲ್ ನ ಶೈಲಜಾ ಪ್ರಶ್ನಿಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ನಾನು ಓರ್ವ ಹಿಂದೂ ಹೆಣ್ಣುಮಗಳು. ನಾನು ಕೂಡ ದೇವ, ದೈವ ಭಕ್ತೆ. ಆದರೆ, ನಾನು ಹಿಂದೂ ಎಂದು ಯಾವುದೇ ಸಂಘಟನೆಗಳಿಂದ ನನಗೆ ಸರ್ಟಿಫಿಕೆಟ್ ಅಗತ್ಯವಿಲ್ಲ. ನನಗೆ ಬಿಜೆಪಿ ಸರಕಾರ ರಕ್ಷಣೆ ನೀಡುತ್ತಿಲ್ಲ. ನಾನು ನಂಬಿದ ದೈವ ದೇವರುಗಳು ನನ್ನನ್ನು ರಕ್ಷಣೆ ಮಾಡುತ್ತಿವೆ ಎಂದರು. ನನ್ನನ್ನು ಕಾಂಗ್ರೆಸ್ ನಾಯಕಿ ಎಂದು ಅನಗತ್ಯ ಪ್ರಚಾರ ನೀಡುತ್ತಿದ್ದಾರೆ ಎಂದರು.
ನನ್ನನ್ನು ಬಂಧಿಸಿ ಜೈಲಿಗೆ ಕಳುಹಿಸಿ. ಯಾವ ಜೈಲಿಗೆ ಬೇಕಾದರು ಹೋಗಲು ನಾನು ಸಿದ್ದಳಿದ್ದೇನೆ. ಯಾವ ಸೆಕ್ಷನ್ ನಡಿಯಲ್ಲಿ ನನ್ನನ್ನು ಬಂಧಿಸಬೇಕೆಂದು ನಾನು ಹೇಳುತ್ತೇನೆ. ಬಂಧಿಸಿದ ಬಳಿಕ ಯಾವುದೇ ಬೇಲ್ ನಾನು ಪಡೆಯಲ್ಲ. ಹಿಂದೂ ಹೆಣ್ಣು ಮಗುವಾಗಿಯೇ ಬಿಡುಗಡೆಗೊಳ್ಳುತ್ತೇನೆ. ದೈವ ಭಕ್ತೆಯಾಗಿಯೇ ಬರ್ತೇನೆ ಎಂದು ಶೈಲಜಾ ಹೇಳಿದ್ದಾರೆ.