ಉಡುಪಿ, ಜೂ 20 (DaijiworldNews/HR): ಎ.ಜಿ ಕೊಡ್ಗಿಯವರು ಜಿಲ್ಲೆಯ ಓರ್ವ ಮುತ್ಸದ್ಧಿ ರಾಜಕಾರಣಿಯಾಗಿದ್ದರು. ಶಾಸಕರಾಗಿ, ಸಹಕಾರಿ ಧುರೀಣರಾಗಿ, ಸಾಮಾಜಿಕ ಕ್ಷೇತ್ರದಲ್ಲಿಯೂ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ರಾಜಕೀಯವಾದ ಮುತ್ಸದ್ಧಿಯನವನ್ನು ಅವರು ಹೊಂದಿದ್ದರು ಎಂದು ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು.
ಕುಂದಾಪುರ ಹೋಟೆಲ್ ಶರೋನ್ ಸಭಾಂಗಣದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಕುಂದಾಪುರ ವತಿಯಿಂದ ಮಾಜಿ ಶಾಸಕ, ಸಹಕಾರಿ ಧುರೀಣ ಎ.ಜಿ.ಕೊಡ್ಗಿಯವರಿಗೆ ಶ್ರದ್ದಾಂಜಲಿ ಸಭೆಯಲ್ಲಿ ದೀಪ ಬೆಳಗಿಸಿ, ಎ.ಜಿ.ಕೊಡ್ಗಿ ಅವರ ಭಾವಚಿತ್ರಕ್ಕೆ ಪುಷ್ಪರ್ಚನೆ ಸಲ್ಲಿಸಿ ಮಾತನಾಡಿದ ಅವರು, ತನಗೆ ಲಭಿಸಿದ ಹುದ್ದೆಯ ಮಹತ್ವ ಅರಿತು ತನ್ನ ಕರ್ತವ್ಯ ನಿರ್ವಹಿಸುತ್ತಿದ್ದರು. ಜಿಲ್ಲಾ ಪರಿಷತ್, ತಾಲೂಕು ಪಂಚಾಯತ್ಗಳಲ್ಲಿ ಅವರು ಸದಸ್ಯರಾಗಿದ್ದಾಗ ಸಾಕಷ್ಟು ಕಾನುನು ಅರವು ಹೊಂದಿದ್ದರು. ಕಾಯ್ದೆ, ಕಾನೂನು ತಿಳಿದುಕೊಂಡು ಸಭೆಗಳಿಗೆ ಹೋಗುತ್ತಿದ್ದರು. ಸಭೆಯಲ್ಲಿ ಕೊಡ್ಗಿಯವರು ಬರುತ್ತಿದ್ದಂತೆ ಅಧಿಕಾರಿಗಳು ಹೆದರುತಿದ್ದ ವಾತವರಣವಿತ್ತು. ಇವತ್ತು ಅದು ಮರೆಯಾಗಿದೆ ಎಂದರು.
ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಮಾತನಾಡಿ, ಎ.ಜಿ ಕೊಡ್ಗಿಯವರು ನೇರ ನಿಷ್ಠುರವಾದಿ. ತನ್ನದೇಯಾದ ಶಿಸ್ತನ್ನು ಅವರು ರಾಜಕೀಯ ಹಾಗೂ ಸಾಮಾಜಿಕ ಜೀವನದಲ್ಲಿ ಮೈಗೂಡಿಸಿಕೊಂಡವರು. ರಾಜಕೀಯ ಕ್ಷೇತ್ರದಲ್ಲಿ ದಿಟ್ಟ ಹೋರಾಟಗಾರರಾಗಿ ಗುರುತಿಸಿಕೊಂಡವರು. ಎರಡು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದರು. ರಾಜಕಾರಣದಿಂದ ನಿವೃತ್ತಿ ಪಡೆದ ಬಳಿಕ ಅಮಾಸೆಬೈಲು ಚಾರಿಟೆಬಲ್ ಟ್ರಸ್ಟ ಮೂಲಕ ತನ್ನೂರಿನ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡವರು ಎಂದು ಅಭಿಪ್ರಾಯ ಪಟ್ಟರು.
ಮಾಣಿಗೋಪಾಲ ಮಾತನಾಡಿ, ಎ.ಜಿ ಕೊಡ್ಗಿಯವರು ದೇವರಾಜ ಅರಸು ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಅವರಿಗೆ ಅರಸು ಸಂಪುಟದಲ್ಲಿ ಸಚಿವರಾಗುವ ಅವಕಾಶಗಳಿದ್ದವು. ಸ್ವತಃ ಭೂಮಾಲಿಕರಾಗಿದ್ದರೂ ಕೂಡಾ ಅವರು ಭೂ ಮಸೂಧೆಯ ಸಂದರ್ಭದಲ್ಲಿ ಜನರ ಪರ ನಿಂತಿದ್ದರು. ಜಿಲ್ಲಾ ಪರಿಷತ್ ಮೂಲಕವೂ ಅನೇಕ ಕೊಡುಗೆಯನ್ನು ಅವರು ನೀಡಿದ್ದರು. ಜಾತಿ, ಮತ, ಪಂಥವನ್ನು ಮೀರಿದ ವ್ಯಕ್ತಿ ಅವರದ್ದಾಗಿದ್ದರು ಎಂದರು.
ಕೋಟ ಬ್ಲಾಕ್ ಅಧ್ಯಕ್ಷ ಶಂಕರ ಕುಂದರ್, ಮಾಜಿ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಕೆ. ಸದಾನಂದ ಶೆಟ್ಟಿ, ಹರಿಪ್ರಸಾದ್, ಸತೀಶ ಕಿಣಿ ಬೆಳ್ವೆ, ಬಿ. ಹಿರಿಯಣ್ಣ, ಸಂಪಿಗೆಡಿ ಸಂಜೀವ ಶೆಟ್ಟಿ, ಕೃಷ್ಣದೇವ ಕಾರಂತ, ದೇವಾನಂದ ಶೆಟ್ಟಿ, ಜ್ಯೋತಿ ಪುತ್ರನ್, ವಿಕಾಸ್ ಹೆಗ್ಡೆ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಜಯರಾಮ ಶೆಟ್ಟಿ ಬೆಳ್ವೆ, ಶರತ ಹೆಗ್ಡೆ ಕೆದೂರು, ದರ್ಮ ಪ್ರಕಾಶ್, ದೇವಕಿ ಸಣ್ಣಯ್ಯ, ದಿನೇಶ ಹೆಗ್ದೆ, ಎ. ಪಿ. ಚಾತ್ರ, ಇಚ್ಚಿತಾರ್ಥ ಶೆಟ್ಟಿ, ನಾರಾಯಣ್ ಆಬಾರ್, ಅಶ್ವತ್ ಕುಂದಾಪುರ, ನಟರಾಜ್ ಹೊಳ್ಳ, ಅಭಿಜಿತ್ ಪೂಜಾರಿ, ಪ್ರಭಾವತಿ ಶೆಟ್ಟಿ, ನ್ಯಾಯವಾದಿ ರವಿರಾಜ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ವಿನೋದ್ ಕ್ರಾಸ್ತಾ ಸ್ವಾಗತಿಸಿದರು. ಕೃಷ್ಣ ಪೂಜಾರಿ ಅಮಾಸೆಬೈಲು ವಂದಿಸಿದರು. ಸೂರ್ಯಪ್ರಕಾಶ್ ದಾಮ್ಲೆ ಶ್ರದ್ದಾಂಜಲಿ ಸಭೆಯನ್ನು ನಿರ್ವಹಿಸಿದರು.