ಬೆಳ್ತಂಗಡಿ, ಜೂ 20 (DaijiworldNews/HR): ಉಜಿರೆಯ ನಾಗರಾಜ ಕಾಂಪೌಂಡ್ ಎಂಬುವರ ಬಾವಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ನಡೆದಿದೆ.
ಜಮೀನಿನ ಮಾಲೀಕರು ಮೈಸೂರಿನಲ್ಲಿ ನೆಲೆಸಿದ್ದು, ಅವರು ಒಂದು ವಾರದ ಹಿಂದೆ ಜಮೀನಿಗೆ ಬಂದಿದ್ದು, ಬಾವಿಯಲ್ಲಿ ತಲೆ ತೇಲುತ್ತಿರುವುದನ್ನು ಕಂಡು ತೆಂಗಿನಕಾಯಿಯೇ ಇರಬೇಕು ಎಂದುಕೊಂಡರು.
ಇನ್ನು ಜೂನ್ 19 ರ ಭಾನುವಾರದಂದು ಮತ್ತೊಮ್ಮೆ ಭೇಟಿ ನೀಡಿದ ವೇಳೆ ಅವರ ಮನೆಯ ಸುತ್ತಮುತ್ತ ವಾಸನೆ ಬಂದಿದ್ದು, ಬಾವಿಯನ್ನು ಪರಿಶೀಲಿಸಿದಾಗ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ.
ಸ್ಥಳೀಯರ ನೆರವಿನಿಂದ ಮೃತದೇಹವನ್ನು ಮೇಲೆತ್ತಲಾಗಿದ್ದು, ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.